ಜಿಲ್ಲೆ

Sayi mandir ಸತ್ಯ ಸಾಯಿಬಾಬಾ ಅವರ ಜೀವನ ಚರಿತ್ರೆಯ ಸಿನೆಮಾ ಶೀಘ್ರ

Uttara Kannada - Subash Hegde

ಕಾರವಾರ: ಕೋಡಿಬಾಗದ ಶಿರಡಿ ಸಾಯಿಬಾಬಾ ಮಂದಿರದಲ್ಲಿSayi mandir ಸೋಮವಾರ 57ನೇ ವಾರ್ಷಿಕೋತ್ಸವದ ಸಭಾ  ಕಾರ್ಯಕ್ರಮ ನಡೆಯಿತು.

ನಟ, ನಿರ್ದೇಶಕ ಓಂ ಸಾಯಿ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ  ಉತ್ತಮ ಸಂಸ್ಕಾರ ಹೊಂದಿದ ಪ್ರತಿಯೊಬ್ಬರಿಗೂ ಸಾಯಿಬಾಬಾ ಅವರ ದರ್ಶನ ಭಾಗ್ಯ ಸಿಗುತ್ತದೆ. ನಾವು ಅವರ ಆದರ್ಶಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು  ಹೇಳಿದರು. ಸತ್ಯ ಸಾಯಿಬಾಬಾ ಅವರು ಸಾರಿದ ಆದರ್ಶಗಳು ಇಂದು ನಮ್ಮನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿವೆ. ಉತ್ತಮ ಸಂಸ್ಕಾರ, ದಾನ, ಧರ್ಮದ ಮೂಲಕ ಪ್ರತಿಯೊಬ್ಬರು ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದರು. ಜೀವನದಲ್ಲಿ ಅದೇಷ್ಟೋ ಘಟನೆಗಳನ್ನು ಪವಾಡವಾಗಿ ನಡೆದಿವೆ. ಸತ್ಯ ಸಾಯಿಬಾಬಾರವರನ್ನು ನಂಬಿದವರಿಗೆ ದೇವರಾಗಿಯೇ ಕಾಣುತ್ತಾರೆ. ಅವರ ಪುಣ್ಯದ ಕೆಲಸಗಳು ನಮಗೆ ದಾರಿದೀಪವಾಗಿದೆ. ಅವುಗಳನ್ನು ಮುನ್ನಡೆಸಿಕೊಂಡು ಹೋಗುವುದು ಸ್ವಾಮೀಯ ಭಕ್ತರರಾದ ನಮ್ಮೆಲ್ಲರ ಮೇಲಿದೆ ಎಂದರು. ಸತ್ಯ ಸಾಯಿಬಾಬಾ ಅವರ ಜೀವನ ಚರಿತ್ರೆಯುಳ್ಳ ಸಿನೇಮಾವನ್ನು ಮಾಡುವ ಕನಸು ಇದೆ. ಇದು ನನ್ನ ಕೊನೆಯ ಕನಸು ಕೂಡ ಹೌದು. ಸ್ವಾಮೀಯ ಆಶಿರ್ವಾದದಿಂದ ಈಗಾಗಲೇ ಸ್ಕ್ರಿಪ್ಟ್‌  ಸಿದ್ದವಾಗಿದ್ದು ನಿರ್ಮಾಪಕರು ಸಿಕ್ಕಿದ್ದಾರೆ. ಆದಷ್ಟು ಬೇಗ ಸಿನೆಮಾ ಜನರ ಮುಂದೆ ಬರಲಿದೆ ಎಂದರು.

Sayi mandir ಸನ್ಮಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ದೇವಸ್ಥಾನ ಸಮೀಪದ ತನ್ವಿ ಶಶಿರಾಜ ಕುಮಾರೇಶ, ರಂಜಿತಾ ರಾಮನಾಥ ಮೇತ್ರಿ, ಪ್ರಜಯ ಪ್ರಕಾಶ ತಳೇಕರ್ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಯಿಶ್ರೀ ಸಂತೋಷ ಶೇಟ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ತೂರಿನ ಮಧುಸೂದನ್ ನಾಯಕ್, ಪ್ರಾಧ್ಯಾಪಕ ಗೋವಿಂದ ಭಟ್, ಬೆಳೂರಿನ ಸತ್ಯಸಾಯಿ ಸ್ಕೂಲ್‌ನ ಅಧ್ಯಕ್ಷರಾದ ಎಚ್.ಎಸ್. ಗಿರೀಶ್, ಸಾಯಿಕಟ್ಟಾ ಸಾಯಿ ಮಂದಿರದ ವ್ಯವಸ್ಥಾಪಕ ಹಾಗೂ ಪೂಜಾರಿ ಶಿವಾನಂದ ಎಲ್. ಮೇತ್ರಿ ಇದ್ದರು.

ಸುಭಾಷ್ ಅರ್ಜುನ್ ನಾಯ್ಕ ಹಾಗೂ ಕೃಷ್ಣಾನಂದ ಮೇತ್ರಿ ಅತಿಥಿಗಳನ್ನು ಪರಿಚಯಿಸಿದರು. ಪ್ರಗತಿ ಶೇಟ್ ವರದಿ ವಾಚಿಸಿದರು. ಕಿಶೋರ್ ಕೆ ನಾಯ್ಕ ವಂದಿಸಿದರು. ಸಂತೋಷ್ ಎಂ ಶೇಟ್ ನಿರೂಪಿಸಿದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದಿ. ಶಾಂತಾರಾಮ ಸೈರು ನಾಯ್ಕ ಕುಟುಂಬದವರು, ಸಾಯಿಕಟ್ಟಾ ಸಾಯಿ ಭಕ್ತ ಭಜನಾ ಮಂಡಳಿ ಹಾಗೂ ಸತ್ಯಸಾಯಿ ಸೇವಾ ಸಮಿತಿ ಕೋಡಿಬಾಗ ಇವರಿಂದ ಭಜನಾ ಕಾರ್ಯಕ್ರಮ ನಡೆದವು.