ಜಿಲ್ಲೆ

ತಾಯಿ ಹೆಸರಲ್ಲಿ ಗಿಡ ನಾಟಿ ಶ್ಲಾಘನೀಯ : ರೇಷ್ಮಾ ಮೆಚ್ಚುಗೆ

ಸೌಮ್ಯ ಆರ್

ಹಳೆಯಂಗಡಿ: ಜೀವನದ ಮೊದಲ ಗುರುವಾದ ತಾಯಿಗೆ ಗೌರವ ನೀಡುವಂತೆ ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು ಅವರ ಹೆಸರನ್ನು ಶಾಶ್ವತಗೊಳಿಸುವ ಕಾರ್ಯ ಸ್ತುತ್ಯರ್ಹ ಎಂದು ಹಳೆಯಂಗಡಿ ಮಹಿಳಾ ಮಂಡಲದ ಅಧ್ಯಕ್ಷೆ ರೇಷ್ಮಾ ಹೇಳಿದರು.

ಹಳೆಯಂಗಡಿ ಯುವತಿ ಮಂಡಲ ಮತ್ತು ಮಹಿಳಾ ಮಂಡಲ ವತಿಯಿಂದ ಏಕ್ ಪೇಡ್ ಮಾ ಕೆ ನಾಮ್ ಅಂಗವಾಗಿ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು ಮಾತನಾಡಿದರು.

ದಕ್ಷಿಣ ಕನ್ನಡ ಮೈ ಭಾರತ್‌ನ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ಹಸಿರು ಇದ್ದರೆ ಮಾತ್ರ ಉಸಿರು. ಪರಿಸರ ಸಂರಕ್ಷಣೆ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಉತ್ತಮ ಆರೋಗ್ಯ ಬೇಕಾದರೆ ಪರಿಸರ ಸಂರಕ್ಷಣೆ ಅನಿವಾರ್ಯ ಎಂದರು.

ಮೈ ಭಾರತ್ ಹಿರಿಯ ಅಧಿಕಾರಿ ಜಗದೀಶ್ ಕೆ, ಯುವತಿ ಮಂಡಲದ ಅಧ್ಯಕ್ಷೆ ರಶ್ವಿತ, ಕಾರ್ಯದರ್ಶಿ ಪ್ರೇಮಲತಾ ಯೋಗೀಶ್, ಕೋಶಾಧಿಕಾರಿ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.