ಜಿಲ್ಲೆ

ಸಂಘಕ್ಕೆ ಗ್ರಾಮೀಣ ಭಾಗದಲ್ಲಿ ಮನ್ನಣೆ

ಇಂದಿರಾ ಎನ್ ಕೆ

ಹೆಬ್ರಿ: ನಮ್ಮ ಸಂಸ್ಥೆ ಅನೇಕ ವರ್ಷ ಶೇ.100 ಸಾಲ ರಿಕವರಿ ಮಾಡಿದೆ. ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಸಾಲ ನೀಡಿ ಜನಮನ್ನಣೆ ಗಳಿಸಿದೆ ಎಂದು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಹೇಳಿದರು.

ಶೈಕ್ಷಣಿಕ ಕೈಗಾರಿಕಾ ಭೇಟಿ ಕಾರ್ಯಕ್ರಮ ಪ್ರಯುಕ್ತ ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿಗಳು ಸಂಸ್ಥೆಗೆ ಭೇಟಿ ನೀಡಿದಾಗ ನಡೆದ ಸಂವಾದದಲ್ಲಿ ಮಾತನಾಡಿದರು. ಉಪನ್ಯಾಸಕ ಅರುಣ್ ಕುಮಾರ್ ಕೆ ಶುಭಹಾರೈಸಿದರು. ಉಪನ್ಯಾಸಕಿ ಮಂಜುಳಾದೇವಿ, ನಿರ್ದೇಶಕ ದೀಕ್ಷಿತ್ ನಾಯಕ್, ಸಿಇಒ ನರೇಂದ್ರ, ವ್ಯವಸ್ಥಾಪಕಿ ರಾಜೇಶ್ರೀ, ವಿದ್ಯಾರ್ಥಿಗಳಿದ್ದರು.