ಸಿರಿಗೇರಿಯಲ್ಲಿ ಗುರುವಾರ ವಲಯ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಬಿಇಒ ಎಚ್.ಗುರ‌್ರಪ್ಪ, ಕ್ಷೇತ್ರ ಸಂಪನ್ಮೂಲವ್ಯಕ್ತಿ ಎಸ್.ಯೋಗಾನಂದಯ್ಯ, ವೀರೇಶ್.ವೈ, ಚನ್ನಬಸವನಗೌಡ, ಶಿಕ್ಷಣ ಸಂಯೋಜಕ ಎಚ್.ಪಂಪಾಪತಿ ಇದ್ದರು. 
ಜಿಲ್ಲೆ

ಪ್ರತಿಭೆ ಪ್ರದರ್ಶನಕ್ಕೆ ಕಾರಂಜಿ ಉತ್ತಮ ವೇದಿಕೆ

ನರೇಶ್ ಕುಮಾರ್

ಸಿರಿಗೇರಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳ ಪ್ರತಿಭೆ ಗುರುತಿಸಿ ಹೊರ ತರಬೇಕು ಎಂದು ಬಿಇಒ ಎಚ್.ಗುರ‌್ರಪ್ಪ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಲಯಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭೆ ಯಾರ ಸ್ವತ್ತಲ್ಲ. ಸಾಧನೆಯ ಶಿಖರ ಏರಬೇಕೆಂದರೆ ಛಲ, ನಿರಂತರ ಶ್ರಮ ಇರಬೇಕು. ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಗ್ರಾಮದ 17 ಶಾಲೆಗಳ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ 400ಕ್ಕೂ ಹೆಚ್ಚು ಮಕ್ಕಳು ಛದ್ಮವೇಷ, ಭರತನಾಟ್ಯ,ಅಭಿನಯ ಗೀತೆ, ಕಂಠಪಾಠ, ಜಾನಪದ ಗೀತೆ, ಸಾಮೂಹಿಕ ನೃತ್ಯ, ವೇಷಭೂಷಣ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಗ್ರಾಪಂ ಅಧ್ಯಕ್ಷೆ ಪೂಜಾರಿ ಲಕ್ಷ್ಮಮ್ಮ ಕರಿಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಿಆರ್‌ಪಿ ಅರುಣ್ ಕುಮಾರ್ ,ಇಸಿಒ ಪಂಪಾಪತಿ, ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರಗಳು, ಲೇಖನಿ ಸಾಮಗ್ರಿ ವಿತರಿಸಿದರು. ಎಂ.ಸೂಗೂರು, ತೆಕ್ಕಲಕೋಟೆ, ದರೂರು ಶಾಲೆ ಶಿಕ್ಷಕರು ತೀರ್ಪುಗಾರರಾಗಿ ನಿರ್ವಹಿಸಿದರು.

ಗ್ರಾಪಂ ಉಪಾಧ್ಯಕ್ಷ ಎರ‌್ರೆಪ್ಪ, ಎಸ್ಡಿಎಂಸಿ ಅಧ್ಯಕ್ಷ ವೆಂಕಪ್ಪ, ಮಾಜಿ ಉಪಾಧ್ಯಕ್ಷ ಕರ್ಲಿಂಗಪ್ಪ, ಡಯಟ್‌ನ ಉಪನ್ಯಾಸಕರಾದ ಚಂದು, ಬಿಆರ್‌ಸಿ ಕೋಆರ್ಡಿನೇಟರ್ ಎಸ್.ಯೋಗಾನಂದಯ್ಯ, ಬಿಆರ್‌ಪಿ, ಚನ್ನಬಸವನಗೌಡ, ವೀರೇಶ್.ವೈ, ಮುಖ್ಯಶಿಕ್ಷಕರಾದ ದುರ್ಗಪ್ಪ ಇತರರಿದ್ದರು.