ಸಂಡೂರು ತಾಲೂಕಿನ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸೌಭಾಗ್ಯ ಲಕ್ಷೀ ಅವರನ್ನು ಗೌರವಿಸಲಾಯಿತು. ಶ್ರೀ ಪ್ರಭುಸ್ವಾಮೀಜಿ, ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ನಾಗರಾಜ, ಗೌರವ ಅಧ್ಯಕ್ಷೆ ಅಂಕಮನಾಳ್ ಶಾಂತಮ್ಮ, ಡಾ.ಪೂರ್ಣಿಮಾ, ಪಿಎಸ್‌ಐ ಕೆ.ನಾಗರತ್ನ ಇತರರಿದ್ದರು. 
ಜಿಲ್ಲೆ

ವಚನಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸೌಭಾಗ್ಯ ಲಕ್ಷ್ಮೀ ಅನಿಸಿಕೆ

ಸಂಡೂರು: ಶರಣರ ವಚನಗಳನ್ನು ಚಾರಿತ್ರಿಕವಾಗಿ ಹೇಳುವುದರಿಂದ ಮನುಷ್ಯನಿಗೆ ಆಲೋಚನೆ ಮೂಡುತ್ತದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸೌಭಾಗ್ಯ ಲಕ್ಷ್ಮೀ ಹೇಳಿದರು.

ಪಟ್ಟಣದ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಆಯೋಜಿಸಿದ್ದ ಅನುಭವ ಸಾಹಿತ್ಯ ಪ್ರವಚನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಶಿವಶರಣೆಯರ ಅನುಭವ ಸಾಹಿತ್ಯದ ಬಗ್ಗೆ ವಾರಗಟ್ಟಲೆ ಉಪನ್ಯಾಸ ಹಮ್ಮಿಕೊಂಡಿರುವುದು ಶ್ಲಾಘನೀಯ. ಮಕ್ಕಳಿಗೆ ಸಾಹಿತ್ಯ ಅಭಿರುಚಿ ಬೆಳೆಸಲು ಮುಂದಾಗಬೇಕು ಎಂದರು.

ಶ್ರೀ ಪ್ರಭುಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ರಚಿಸಿದ ವಚನಗಳು ಸಮಾಜಕ್ಕೆ ಮಾದರಿಯಾಗಿವೆ. ಅವರ ವಚನಗಳನ್ನು ನಿತ್ಯ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ.ಪೂರ್ಣಿಮಾ, ಪಿಎಸ್‌ಐ ಕೆ.ನಾಗರತ್ನ ಮಾತನಾಡಿದರು. ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ನಾಗರಾಜ, ಗೌರವ ಅಧ್ಯಕ್ಷೆ ಅಂಕಮನಾಳ್ ಶಾಂತಮ್ಮ, ಕಾರ್ಯದರ್ಶಿ ವಿಶಾಲಾಕ್ಷಿ, ಪ್ರಮುಖರಾದ ಸರೋಜಾ ಜ್ಯೋತಿ, ವಿಶಾಲಾಕ್ಷಿ, ಅನುಪಮಾ, ಬಂಡೇಮೇಗಳ ಗಂಗಮ್ಮ, ಜ್ಯೋತಿ ಗೌರಮ್ಮ ಇತರರಿದ್ದರು.