ಉತ್ತಮ ಜೀವನಕ್ಕೆ ವಚನ ಉಪಕಾರಿ

28Kush05
Published on
  • ಕುಶಾಲನಗರ : ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ರೂಪಿಸಲು ವಚನ ಸಾಹಿತ್ಯ ಉತ್ತಮ ವೇದಿಕೆಯಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಉಪಕಾರಿ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಹೇಳಿದರು.
    ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಕುಶಾಲನಗರದ ಮೂಕಾಂಬಿಕ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ-ಕಾಲೇಜುಗಳೆಡೆಗೆ ವಚನ ಸಾಹಿತ್ಯದ ನಡಿಗೆ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಲಿಂಗ, ವರ್ಣ ಹಾಗೂ ವರ್ಗ ತಾರತಮ್ಯ ಇಲ್ಲದೆ ಎಲ್ಲರನ್ನೂ ಸರಿ ಸಮಾನವಾಗಿ ಕಾಣುವಂತಹ ವ್ಯವಸ್ಥೆಯನ್ನು ಅನುಭವ ಮಂಟಪದ ಮೂಲಕ ಸಮಾಜಕ್ಕೆ ಸಾರಿದವರು ಬಸವಾದಿ ಶರಣರು. ಇಂತಹ ಮಹಾಪುರುಷರಿಂದ ರೂಪುಗೊಂಡ ವಚನ ಸಾಹಿತ್ಯದ ಅರಿವು ಇಂದು ಅಗತ್ಯ ಎಂದು ಹೇಳಿದರು.
    ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ವಿವೇಕಾನಂದರ ವಿವೇಕವಾಣಿ, ಬಸವಾದಿ ಶರಣರ ವಚನವಾಣಿಗಳನ್ನು ಅರಿತು ಅದರಂತೆ ನಡೆದಲ್ಲಿ ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಹಾಗೆಯೇ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ರಚಿಸಿ ರೂಪಿಸಿದ ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರ ಪಾರಮಾರ್ಥಿಕ ಜೀವನದತ್ತ ಕರೆದೊಯ್ಯುತ್ತದೆ ಎಂದು ಡಾ.ಜಮೀರ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net