ಸಂಡೂರಿನಲ್ಲಿ ಶಾಸಕ ಈ.ತುಕಾರಾಮ್‌ಗೆ ಸರ್ಕಾರಿ ನೌಕರರ ತಾಲೂಕು ಸಂಘದ ಹಾಗೂ ವೃಂದ ಸಂಘಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಚೌಕಳಿ ಪರಶುರಾಮಪ್ಪ, ಕಾರ್ಯದರ್ಶಿ ಹುಲೇಶಿ, ರಾಜ್ಯ ಪರಿಷತ್ ಸದಸ್ಯ ಈಶ್ವರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ತಮ್ಮಪ್ಪ, ಪ್ರೌಢಶಾಲ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಷಣ್ಮುಖರಾವ್ ಇನ್ನಿತರರಿದ್ದರು. 
ಜಿಲ್ಲೆ

ಎನ್‌ಪಿಎಸ್ ರದ್ದು ಮಾಡಿ

ಪ್ರವೀಣ ಉದುಸಾ ದಲಬಂಜನ್

ಸಂಡೂರು: ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಸರ್ಕಾರಿ ನೌಕರರ ತಾಲೂಕು ಸಂಘ ಹಾಗೂ ವೃಂದ ಸಂಘಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಶಾಸಕ ಈ.ತುಕಾರಾಮ್‌ಗೆ ಶನಿವಾರ ಮನವಿ ಸಲ್ಲಿಸಿದರು.

ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿ

ಏಳನೇಯ ವೇತನ ಆಯೋಗದ ವರದಿಯನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಬೇಕು. ಎನ್‌ಪಿಎಸ್ ರದ್ದು ಮಾಡಬೇಕು. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡಬೇಕು ಎಂದು ಸಂಘದ ತಾಲೂಕಾಧ್ಯಕ್ಷ ಚೌಕಳಿ ಪರಶುರಾಮಪ್ಪ ಒತ್ತಾಯಿಸಿದರು.

ಶಾಸಕ ಈ.ತುಕಾರಾಮ್ ಮಾತನಾಡಿ, ವರದಿಯನ್ನು ಅನುಷ್ಠಾನ ಮಾಡಲು ಮುಖ್ಯಮಂತ್ರಿಗಳಿಗೆ ತಿಳಿಸಲಾಗುವುದು. ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲಾಗುವುದು. ಸಂಡೂರು ಸರ್ಕಾರಿ ನೌಕರರ ಸಂಘದ ಭವನವನ್ನು ಫೆಬ್ರವರಿ ತಿಂಗಳಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಸಂಘದ ತಾಲೂಕು ಕಾರ್ಯದರ್ಶಿ ಹುಲೇಶಿ, ರಾಜ್ಯ ಪರಿಷತ್ ಸದಸ್ಯ ಈಶ್ವರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ತಮ್ಮಪ್ಪ, ಪ್ರೌಢಶಾಲ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಷಣ್ಮುಖರಾವ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಕೊಟ್ರೇಶ್, ಸಾವಿತ್ರಿಬಾಯಿ ಫುಲೆ ಸಂಘದ ತಾಲೂಕಾಧ್ಯಕ್ಷೆ ಪ್ರೇಮ, ಮುಖ್ಯ ಶಿಕ್ಷಕಿ ವಾಣಿರಘು ಇನ್ನಿತರರಿದ್ದರು.