ದಾಂಡೇಲಿಯಲ್ಲಿ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನೇತೃತ್ವದಲ್ಲಿ ಧಾರ್ವಿುಕ ಕಾರ್ಯಕ್ರಮ

14 dnd 1- Parthagali sri
Published on

ದಾಂಡೇಲಿ: ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶಾಖಾಮಠ ಶ್ರೀ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಮೂರು ದಿನಗಳಿಂದ ವಿಶೇಷ ಪೂಜೆ, ಹವನ ಪೂರ್ಣಾಹುತಿ, ಧನ್ವಂತರಿ, ತಪ್ತ ಮುದ್ರಾಧಾರಣೆ, ಧಾರವಾಡದ ಕಲಾವಿದರಿಂದ ಚಿಂತನ ರಾಮಾಯಣ ಪ್ರದರ್ಶನ ಸೇರಿ ಹಲವಾರು ಕಾರ್ಯಕ್ರಮಗಳು ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದವು.


ಕೊಳವೆ ಬಾವಿ ಕೊಡುಗೆ: ಮಾಜಿ ಶಾಸಕ ಸುನಿಲ ಹೆಗಡೆ ಅವರು ಕುಟಂಬ ಸಮೇತರಾಗಿ ಆಗಮಿಸಿ ಧನ್ವಂತರಿ ಹವನದಲ್ಲಿ ಭಾಗವಹಿಸಿದರು. ನಂತರ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ದೇವಸ್ಥಾನದ ಆವರಣದಲ್ಲಿ ವಿ.ಡಿ. ಹೆಗಡೆ ಹೆಸರಿನಲ್ಲಿ ನಿರ್ವಣವಾಗುವ ಕೊಳವೆ ಬಾವಿಗೆ ಭೂಮಿ ನೆರವೇರಿಸಿದರು.
ವಿ.ಡಿ. ಹೆಗಡೆ, ಸುವರ್ಣ ಹೆಗಡೆ, ಜಿಎಸ್​ಬಿ ಸಮಾಜದ ಮತ್ತು ಶಾಖಾ ಮಠದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net