ಕುರೇಕುಪ್ಪದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನಿಂದ ಭಗತ್‌ಸಿಂಗ್ ಜನ್ಮದಿನ ಆಚರಿಸಲಾಯಿತು. ಪ್ರಮುಖರಾದ ವಿ.ದೇವಣ್ಣ, ಕೆ.ಹೊನ್ನೂರಪ್ಪ, ಜಿ.ಪಂಪನಗೌಡ, ವಿ.ಹೊನ್ನೂರಪ್ಪ, ಶಿವಕುಮಾರ ಇತರರಿದ್ದರು. 
ಜಿಲ್ಲೆ

ಭಗತ್ ಸಿಂಗ್ ಹೋರಾಟ ಆದರ್ಶ

ನರೇಶ್ ಕುಮಾರ್

ಸಂಡೂರು: ಕ್ರಾಂತಿಕಾರಿ ಭಗತ್‌ಸಿಂಗ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಸಾರ್ವಭೌಮ, ಏಕತೆ ಸಮಗ್ರತೆ ಕಾಪಾಡಬೇಕು ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ತಾಲೂಕು ಅಧ್ಯಕ್ಷ ವಿ.ದೇವಣ್ಣ ಹೇಳಿದರು.

ಕುರೇಕುಪ್ಪದಲ್ಲಿ ಗುರುವಾರ ಏರ್ಪಡಿಸಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಗತ್ ಸಿಂಗ್ ಸ್ವಾತಂತ್ರೃ ಹೋರಾಟದ ಕಿಚ್ಚು ಹಚ್ಚಿದರು. ದೇಶಕ್ಕೆ ಸ್ವಾತಂತ್ರೃ ಸಿಕ್ಕರೆ ಸಾಲದು ಸಮಾಜವಾದಿ ಭಾರತದ ನಿರ್ಮಾಣವಾಗಬೇಕು ಎಂಬ ಕನಸು ಕಂಡಿದ್ದರು. ಇದಕ್ಕೆ ಹೆದರಿದ ಬ್ರಿಟಿಷರು ಭಗತ್ ಅವರನ್ನು 23ನೇ ವಯಸ್ಸಿಗೆ ಗಲ್ಲಿಗೇರಿಸಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಗತ್ ಧೈರ್ಯ, ಹೋರಾಟ ಆದರ್ಶವಾಗಿದೆ ಎಂದರು.

ಸಂಘದ ಗ್ರಾಮ ಘಟಕದ ಅಧ್ಯಕ್ಷ ಕೆ.ಹೊನ್ನೂರಪ್ಪ, ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಪಂಪನಗೌಡ, ಕಟ್ಟಡ ಕಾರ್ಮಿಕರಾದ ವಿ.ಹೊನ್ನೂರಪ್ಪ, ಶಿವಕುಮಾರ, ದೇವರಾಜ, ಮುಖಂಡರಾದ ಎನ್.ದೇವಣ್ಣ, ಮೌನಾಚಾರಿ, ಅಂಜಿನಪ್ಪ, ಜಡಿಯಪ್ಪ, ಎನ್.ಸೋಮಪ್ಪ, ಗಾದಿಲಿಂಗಪ್ಪ, ಜಾಫರ್ ಸಾಬ್, ಮಲ್ಲಿಕಾರ್ಜುನ ಇತರರಿದ್ದರು.