ಜಿಲ್ಲೆ

ಗಂಧ ಕಡಿದು ಪಕ್ಕದ ಮನೆಯ ಕೊಟ್ಟಿಗೆಯಲ್ಲಿ ಬಚ್ಚಿಟ್ಟವ ಅರೆಸ್ಟ್‌

Uttara Kannada - Subash Hegde

ಶಿರಸಿ: ತಾನು ಕಳ್ಳತನದಿಂದ ಕಡಿದ ಗಂಧದ ತುಂಡುಗಳನ್ನು ಪಕ್ಕದ ಮನೆಯ ಕೊಟ್ಟಿಗೆಯಲ್ಲಿ ಬಚ್ಚಿಟ್ಟ ವ್ಯಕ್ತಿ ಅರಣ್ಯಾಧಿಕಾರಿಗಳ ತನಿಖೆಯಿಂದ ಅರೆಸ್ಟ್‌ ಆಗಿದ್ದಾನೆ.

ಬನವಾಸಿ ಹುಸರಿ ಸಮೀಪದ ಮಾಡನಗೇರಿಯ ಗಣಪತಿ ಕನ್ನಾ ಬಡಗಿ ಮನೆಯಲ್ಲಿ ಗಂಧದ ತುಂಡುಗಳು ಇರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 25 ಕೆಜಿಯಷ್ಟು ಹಸಿ ಶ್ರೀಗಂಧ, ಎರಡು ಜೋಡಿ ಹಾಗೂ ಇನ್ನೆರಡು ಬಿಡಿಯಾದ ಜಿಂಕೆ ಕೊಂಬುಗಳು ಸಿಕ್ಕಿವೆ.

ಇದನ್ನೂ ಓದಿ: ಅಂತೂ ಶುರುವಾಯ್ತು ಅಡಕೆಗೆ ಬೆಳೆ ವಿಮೆ ದಾಖಲಾತಿ
ವಿಚಾರಣೆ ನಡೆಸಿದ ಬಳಿಕ ಪಕ್ಕದ ಮನೆಯ ಮಧುಕೇಶ್ವರ ಕೆರಿಯಾ ಮಡಿವಾಳ ಎಂಬಾತ ಅತಿಕ್ರಮಣ ಜಾಗ ಮತ್ತು ಕಾಡಿನಿಂದ ಶ್ರೀಗಂಧ ತಂದು ತಮ್ಮ ಮನೆಯ ಕೊಟ್ಟಿಗೆಯಲ್ಲಿ ಇಟ್ಟಿದ್ದಾಗಿ ತಿಳಿಸಿದ್ದ. ವಿಚಾರಣೆ ಮುಂದುವರಿಸಿದಾಗ ಶ್ರೀಗಂಧ ಕಡಿದ ಜಾಗವೂ ಪತ್ತೆಯಾಗಿದೆ. ಇಬ್ಬರನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ದಾಳಿಯಲ್ಲಿ ಡಿಎಫ್ಒ ಜಿ‌.ಆರ್ ಅಜ್ಜಯ್ಯ, ವಲಯ ಅರಣ್ಯಾಧಿಕಾರಿ ವರದ ರಂಗನಾಥ ಜಿ. ಹೆಚ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.