ಕುಷ್ಟಗಿ ತಾಲೂಕು ಚಿಕ್ಕನಂದಿಹಾಳ ಗ್ರಾಮದಲ್ಲಿ ಮನೆಗೋಡೆ ಕುಸಿದು ಮೃತಪಟ್ಟಿದ್ದ ಶರಣಪ್ಪ ಬಾವಿಕಟ್ಟಿ ಕುಟುಂಬಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ತಹಸೀಲ್ದಾರ್ ಅಶೋಕ ಶಿಗ್ಗಾವಿ ಪರಿಹಾರ ಮೊತ್ತದ ಮಂಜೂರಾತಿ ಆದೇಶ ನೀಡಿದರು. ಕಂದಾಯ ಇಲಾಖೆ ಅಧಿಕಾರಿ ಶರಣಪ್ಪ ಹುಡೇದ್ ಹಾಗೂ ಕುಟುಂಬ ಸದಸ್ಯರು ಇದ್ದರು. 
ಜಿಲ್ಲೆ

ಮಂಜೂರಾತಿ ಆದೇಶ ವಿತರಣೆ

Kopala - Desk - Eraveni

ಕುಷ್ಟಗಿ: ತಾಲೂಕಿನ ಚಿಕ್ಕನಂದಿಹಾಳ ಗ್ರಾಮದ ಶರಣಪ್ಪ ಬಾವಿಕಟ್ಟಿ ಕುಟುಂಬಕ್ಕೆ ತಾಲೂಕು ಆಡಳಿತದಿಂದ ಶುಕ್ರವಾರ ಪರಿಹಾರ ಮೊತ್ತದ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.

ಬಿರುಗಾಳಿಗೆ ಮನೆಯ ಮೇಲ್ಚಾವಣಿಗೆ ಅಳವಡಿಸಿದ್ದ ತಗಡುಗಳು ಹಾರಿ ಹೋಗಿದ್ದಲ್ಲದೆ ಗೋಡೆ ಕುಸಿದು ಶರಣಪ್ಪ ಮೃತಪಟ್ಟಿದ್ದರು. ಮೃತ ಶರಣಪ್ಪ ಬಾವಿಕಟ್ಟಿ ಮನೆಗೆ ತೆರಳಿದ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ತಹಸೀಲ್ದಾರ್ ಅಶೋಕ ಶಿಗ್ಗಾವಿ ಮೃತನ ಪತ್ನಿ ಅಕ್ಕವ್ವಗೆ 5ಲಕ್ಷ ರೂ.ಗಳ ಪರಿಹಾರ ಮೊತ್ತದ ಮಂಜೂರಾತಿ ಆದೇಶ ಪತ್ರ ನೀಡಿ ಸಾಂತ್ವನ ಹೇಳಿದರು. ಕಂದಾಯ ಇಲಾಖೆಯ ಅಧಿಕಾರಿ ಶರಣಪ್ಪ ಹುಡೇದ್ ಇತರರಿದ್ದರು.