ಜಿಲ್ಲೆ

ಕುಂದಾಪುರದ ಬಸ್ರೂರಲ್ಲಿ 'ಬಾಹುಬಲಿ' ಪ್ರಭಾಸ್!; 'ಸಲಾರ್'​ಗಾಗಿ ಆಗಮನ?

Webdesk - Ravikanth

ಕುಂದಾಪುರ: ಸೂಪರ್​ ಹಿಟ್ ಸಿನಿಮಾ 'ಬಾಹುಬಲಿ' ಖ್ಯಾತಿಯ ನಾಯಕ ನಟ ಪ್ರಭಾಸ್​ ಕುಂದಾಪುರದ ಬಸ್ರೂರಿನಲ್ಲಿರುವ ರವಿ ಬಸ್ರೂರ್​ ಸ್ಟುಡಿಯೋಗೆ ಆಗಮಿಸಿದ್ದಾರೆ.

'ಬಾಹುಬಲಿ' ಚಿತ್ರದ ನಂತರ ಅವರ ಕೆಲವು ಚಿತ್ರಗಳು ಸೋಲುಕಂಡಿದ್ದು, ಕನ್ನಡ ಸ್ಟಾರ್ ನಿರ್ದೇಶಕ ಪ್ರಶಾಂತ ನೀಲ್ ನಿರ್ದೇಶನದ 'ಸಲಾರ್' ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡೊಂಡಿರುವ ಪ್ರಭಾಸ್ ಅವರನ್ನು ನಿರ್ದೇಶಕರು ಬಸ್ರೂರಿಗೆ ಕರೆ ತಂದಿದ್ದಾರೆ. ಸದ್ಯ ನಿರ್ದೇಶಕ ಪ್ರಶಾಂತ್‌ ನೀಲ್‌ ಜೊತೆ ಪ್ರಭಾಸ್ ಬಸ್ರೂರಿನಲ್ಲಿ ಒಂದಷ್ಟು ದಿನ ಉಳಿಯಲಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ 'ಸಲಾರ್‌' ಸಿನಿಮಾ ಬಿಡುಗಡೆ ಆಗಲಿದ್ದು, ಅದರ ಒಂದಷ್ಟು ಕೆಲಸ ಬಾಕಿ ಇರುವುದರಿಂದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸ್ಟುಡಿಯೋದಲ್ಲಿ ಬಿಡಾರ ಬಿಟ್ಟಿದ್ದಾರೆ.

ಕುಂದಾಪುರ ಕನ್ನಡ ಸಿನಿಮಾ ಮೂಲಕ ಖ್ಯಾತರಾದ ರವಿ ಬಸ್ರೂರು ಹುಟ್ಟೂರು ಬಸ್ರೂರಿನಲ್ಲಿ ಸ್ಟುಡಿಯೋ ಮಾಡಿಕೊಂಡಿದ್ದಾರೆ. ಇದರಲ್ಲಿ ರೀ-ರೆಕಾರ್ಡಿಂಗ್‌, ಡಬ್ಬಿಂಗ್‌ ಕಾರ್ಯ ನಡೆಯುತ್ತಿದ್ದು ಅದರ ಹಿನ್ನೆಲೆಯಲ್ಲಿ ಪ್ರಭಾಸ್ ಬಸ್ರೂರಿಗೆ ಬಂದಿರುವ ಸಾಧ್ಯತೆ ಇದೆ.