ಮಸ್ಕಿ: ಬಂಜಾರ ಸಮುದಾಯದಿಂದ ಸಂತ ಸೇವಲಾಲ್ ಜಯಂತಿಯನ್ನು ಮಾ.3ರಂದು ಆಯೋಜಿಸಲಾಗಿದೆ ಎಂದು ಸಮುದಾಯದ ತಾಲೂಕು ಅಧ್ಯಕ್ಷ ಅಮರೇಶ ನಾಯ್ಕ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಪ್ರತಿ ವರ್ಷ ಸಂತ ಸೇವಲಾಲ್ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಆಚರಿಸಲಾಗುವುದು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆ ಮಾಡಿ, ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಸಮುದಾಯದ ಪ್ರಮುಖರಾದ ಬಳಿರಾಮ ಮಹಾರಾಜ, ಕುಮಾರ ಮಹಾರಾಜ, ವಿಠಲ ಮಹಾರಾಜ,
ಸಿದ್ಧಲಿಂಗಸ್ವಾಮಿ ಹಾಗೂ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಪಿ.ರಾಜೀವ್, ಮಣಿಕಂಠ ರಾಠೋಡ್, ಆರ್.ಬಸನಗೌಡ ತುರ್ವಿಹಾಳ, ಮಾನಪ್ಪ ವಜ್ಜಲ್, ಹಂಪನಗೌಡ ಬಾದರ್ಲಿ,
ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಮಾಜಿ ಶಾಸಕ ಅಮರೇಗೌಡ ಬಯ್ಯಪುರ, ಮಾದೇವಪ್ಪಗೌಡ ಪಾಟೀಲ್, ಪ್ರತಾಪಗೌಡ ಪಾಟೀಲ್ ಪಾಲ್ಗೊಳ್ಳಲಿದ್ದಾರೆ ಎಂದರು. ಸಮುದಾಯದ ಪ್ರಮುಖರಾದ ಅಮರೇಶ ರಾಠೋಡ, ಅಮರೇಶ ಪವಾರ, ಸಿತಾರಾಮ ರಾಠೋಡ ಇತರರಿದ್ದರು.