ಜೆಸಿಐ ಕುಂದಾಪುರದ ಪೂರ್ವ ಅಧ್ಯಕ್ಷ ಎಸ್.ದಿನೇಶ್ ಗೋಡೆ ಅವರಿಗೆ ವಲಯ ಪ್ರತಿಷ್ಠಿತ ಜೇಸಿ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು 
ಜಿಲ್ಲೆ

ಎಸ್.ದಿನೇಶ್ ಗೋಡೆಗೆ ಸಾಧನಶ್ರೀ ಪ್ರಶಸ್ತಿ

ಇಂದಿರಾ ಎನ್ ಕೆ

ಗಂಗೊಳ್ಳಿ: ಜೆಸಿಐ ಭಾರತದ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ ವೈಭವ ಮಂಗಳೂರಿನಲ್ಲಿ ನಡೆಯಿತು.
ಜೆಸಿಐ ಕುಂದಾಪುರ ಪೂರ್ವ ಅಧ್ಯಕ್ಷ ಎಸ್.ದಿನೇಶ್ ಗೋಡೆ ಅವರಿಗೆ ವಲಯದ ಪ್ರತಿಷ್ಠಿತ ಜೇಸಿ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೆಸಿಐ ವಲಯ 15ರ ವಲಯ ಅಧ್ಯಕ್ಷ ಜೆಸಿಐ ಸೆನೆಟರ್ ಗಿರೀಶ್ ಎಸ್.ಪಿ., ವ್ಯವಹಾರ ವಿಭಾಗ ನಿರ್ದೇಶಕ ಸುನೀಲ್ ಕುಮಾರ್, ಅಭಿವೃದ್ಧಿ ಹಾಗೂ ಬೆಳವಣಿಗೆ ವಿಭಾಗ ನಿರ್ದೇಶಕ ರವಿಚಂದ್ರ ಪಾಟಾಳಿ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ, ಜೆಸಿಐ ಕುಂದಾಪುರ ಘಟಕ ಅಧ್ಯಕ್ಷ ಚಂದನ್ ಗೌಡ, ಘಟಕ ಕಾರ್ಯದರ್ಶಿ ಚೇತನ್ ದೇವಾಡಿಗ, ಜತೆ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬಂಗೇರ, ಘಟಕದ ಕಾರ್ಯಕ್ರಮ ವಿಭಾಗ ನಿರ್ದೇಶಕಿ ದೀಕ್ಷಿತಾ ಗೋಡೆ, ಮಹಿಳಾ ಜೇಸಿ ಸದಸ್ಯೆ ಜಯಲಕ್ಷ್ಮೀಗೋಡೆ, ಯುವ ಜೇಸಿ ಸದಸ್ಯ ದಿಶಾನ್ ಗೋಡೆ, ಲಿಖಿತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.