ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಅಧೀನದಲ್ಲಿ ಕಾರ್ಯನಿರ್ವಹಿಸುವ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆ ಸಮಯದಲ್ಲಿ ರಚಿಸಲಾದ 6 ಐಸಿಯು ಬೆಡ್ಗಳನ್ನು ಕಾರ್ಯಗತಗೊಳಿಸಿ ನಿರ್ವಹಿಸಲು ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಯು 30.9.2021ರ ವರೆಗೆ ತತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದಾಗಿದೆ.
ಮಂಡ್ಯ ಜಿಲ್ಲೆಯಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆ ಮದ್ದೂರು, ಮಳವಳ್ಳಿ ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬೇಕಿದ್ದು, ಪ್ರತಿ ಹುದ್ದೆಗೆ ಒಂದು ಪಾಳಿಗೆ ಒಬ್ಬರಂತೆ ನೇಮಕ ಮಾಡಿಕೊಳ್ಳಲಾಗುವುದು.
ಹುದ್ದೆ ವಿವರ
* ವೈದ್ಯಾಧಿಕಾರಿ
ಎಂಬಿಬಿಎಸ್ ಮಾಡಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಮಾಸಿಕ ಒಬ್ಬ ವೈದ್ಯಾಧಿಕಾರಿಗೆ 60,000 ರೂ. ವೇತನ ನೀಡಲಾಗುವುದು. ಫಿಜಿಷಿಯನ್ ಆದವರಿಗೆ ಮೊದಲ ಆದ್ಯತೆ ನೀಡಲಾಗುವುದು.
* ಶುಶ್ರೂಷಾಧಿಕಾರಿ
ಜಿಎನ್ಎಂ/ ಬಿಎಸ್ಸಿ ನರ್ಸಿಂಗ್ ಮಾಡಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಮಾಸಿಕ 25,000 ರೂ. ವೇತನ ಇದೆ.
ಸೂಚನೆ
ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಶೈಕ್ಷಣಿಕ ಮೂಲ ಅಂಕಪಟ್ಟಿ, ಎಲ್ಲ ಪ್ರಮಾಣ ಪತ್ರ, ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳೊಂದಿಗೆ ಹಾಗೂ ಸದರಿ ದಾಖಲೆಗಳ 2 ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ತರಬೇಕು.
ಸಂದರ್ಶನ ನಡೆಯುವ ದಿನಾಂಕ: 6.5.2021
ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮಂಡ್ಯ ಜಿಲ್ಲೆ. (ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ)
ಅಧಿಸೂಚನೆಗೆ: https://bit.ly/3vEyjzZ