ಉಡುಪಿ: ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ ಮಹಿಳೆಯೊಬ್ಬರ ನಿಯಂತ್ರಣ ತಪ್ಪಿದ್ದರಿಂದ ಕಾರು ಕಂದಕಕ್ಕೆ ಉರುಳಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ರಭಸಕ್ಕೆ ರಸ್ತೆ ಬದಿಯಲ್ಲಿ ನಿಂತಿದ್ದ ಐದು ಬೈಕ್ಗಳು ನಜ್ಜುಗುಜ್ಜಾಗಿವೆ.
ಚಾಲಕಿಯು ಉಡುಪಿಯಿಂದ ಮಣಿಪಾಲಕ್ಕೆ ಹೋಗುತ್ತಿದ್ದರು. ಈ ಸಮಯದಲ್ಲಿ ಅವರು ಚಾಲನೆ ಮಾಡುತ್ತಿದ್ದ ಕಾರು ಲಕ್ಷ್ಮೀಂದ್ರ ನಗರದ ನಿಯಂತ್ರಣ ತಪ್ಪಿಬಿಟ್ಟಿದೆ. ಪಕ್ಕದಲ್ಲಿಯೇ ಇದ್ದ ಕಂದಕಕ್ಕೆ ಕಾರು ಹೋಗಿದೆ. ಅದೃಷ್ಟವಶಾತ್ ಅವರಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದಕ್ಕೆ ಕಾರಣ, ಕಂದಕದಲ್ಲಿದ್ದ ಮರ. ಕೆಳಭಾಗದಲ್ಲಿ ಮರವಿತ್ತು. ಈ ಹಿನ್ನೆಲೆಯಲ್ಲಿ ಅವರ ಕಾರು ಕಂದಕಕ್ಕೆ ಉರುಳಿದರೂ ಮರ ಅಡ್ಡ ಬಂದಿದ್ದರಿಂದ ಚಾಲಕಿಯ ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ.
ಆದರೆ ಕಾರು ಕಂದಕಕ್ಕೆ ಉರುಳುತ್ತಿದ್ದ ರಭಸದಲ್ಲಿ ಅಲ್ಲಿಯೇ ನಿಲ್ಲಿಸಿದ್ದ ಐದು ಬೈಕ್ಗಳು ಕೂಡ ಕಾರಿಗೆ ಡ್ಯಾಷ್ ಹೊಡೆದು ಕಂದಕಕ್ಕೆ ಬಿದ್ದುಬಿಟ್ಟಿವೆ. ಇವೆಲ್ಲವೂ ನ್ಯೂ ಮಣಿಪಾಲ್ ಬಜಾರ್ನ ಸೆಕೆಂಡ್ ಹ್ಯಾಂಡ್ ವಾಹನಗಳಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಮಣಿಪಾಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.