ಜಿಲ್ಲೆ

VIDEO: ಹೊರಗಿಟ್ಟಿರೋ ಶೂಸ್​ ಧರಿಸೋ ಮುನ್ನ ಎಚ್ಚರ: ಪ್ರಾಣಕ್ಕೇ ಕುತ್ತಾದೀತು! ತುಮಕೂರಿನ ಶಾಕಿಂಗ್​ ವಿಡಿಯೋ ನೋಡಿ...

ತುಮಕೂರು: ಮನೆಯ ಹೊರಗೆ ಇಟ್ಟಿರುವ ಶೂಸ್​ ಧರಿಸಲು ಹೋದ ವ್ಯಕ್ತಿಯೊಬ್ಬರು ಅಲ್ಪದಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತುಮಕೂರು ನಗರ ಹೊರವಲಯ ರಂಗಾಪುರದಲ್ಲಿ ನಡೆದಿದೆ.

ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಆಪತ್ತು ಬರುತ್ತಿತ್ತು. ಇದಕ್ಕೆ ಕಾರಣ, ಹೊರಗೆ ಇಟ್ಟಿದ್ದ ಶೂಸ್​ ಒಳಗೆ ತಣ್ಣನೆ ನಾಗರಹಾವಿನ ಮರಿ ಕುಳಿತಿತ್ತು. ರಂಗನಾಥ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ,

ಮನೆ ಮುಂದೆ ಬಿಟ್ಟಿದ್ದ ಶೂಸ್​ ಒಳಗೆ ನಾಗರ ಹಾವು ಸೇರಿಕೊಂಡಿದೆ. ಬೆಳಗ್ಗೆ ಶೂಸ್​ ಧರಿಸಲು ಹೋದಾಗ ಹಾವು ಬುಸುಗುಟ್ಟ ಶಬ್ದ ಕೇಳಿದ್ದರಿಂದ ರಂಗನಾಥ್​ ಅವರ ಬಚಾವಾಗಿದ್ದಾರೆ. ಅನುಮಾನಗೊಂಡು ಒಳಗೆ ಇಣುಕಿದಾಗ ನಾಗರಹಾವು ಕಂಡಿದೆ. ಕೂಡಲೇ ಹಾವು ರಕ್ಷಕ ದಿಲೀಪ್ ಅವರಿಗೆ ರಂಗನಾಥ್ ಅವರು ಮಾಹಿತಿ ನೀಡಿದ್ದಾರೆ.

ಉರಗ ರಕ್ಷಕ ದಿಲೀಪ್ ಅವರು ಹಾವು ಹಿಡಿದು ದೇವರಾಯನದುರ್ಗ ಕಾಡಿಗೆಬಿಟ್ಟಿದ್ದಾರೆ.

ವಿಡಿಯೋಗಳು ಇಲ್ಲಿವೆ ನೋಡಿ..