ಜಿಲ್ಲೆ

ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ- ಯಾವ್ಯಾವ ಜಿಲ್ಲೆಯಲ್ಲಿ ಏನೇನು? ಯಾರಿಗೆಲ್ಲಾ ಏನು ಅನುಕೂಲ?

suchetana

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು ಸಚಿವ ಸಂಪುಟದ ಸಭೆ ನಡೆದು ಅದರಲ್ಲಿ ಹಲವಾರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈ ಬಗೆಗಿನ ವಿವರ ಇಲ್ಲಿದೆ ನೋಡಿ:

- ಕರ್ನಾಟಕ ರಾಜ್ತ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಕಟ್ ಬಾಕಿದಾರರಾದ 1,500 ಜನರಿಗೆ ವಿಶೇಷ ವಿನಾಯಿತಿ ಯೋಜನೆ ಅನ್ವಯಿಸುವುದಕ್ಕೆ ಅಸ್ತು

- ಗೋಹತ್ಯೆ ನಿಷೇಧ ಕಾಯ್ದೆ ಜಾರಿಗಾಗಿ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳ ಸ್ಥಾಪನೆ, ಅಂದಾಜಿಸಿದ ವೆಚ್ಚದ ಪ್ರಕಾರ ಮೊದಲ ಹಂತದಲ್ಲಿ 15 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ

- ಗದಗ ಪಶು ಸಂಗೋಪನೆ ಕಾಲೇಜಿನದ ಮೂರನೇ ಹಂತದ‌ 30 ಕೋಟಿ ರೂ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ

- ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 9 ರಿಂದ 11ರವರೆಗೆ ಇನ್ವೆಸ್ಟ್ ಕರ್ನಾಟಕ-2022; ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆಗೆ ಅಸ್ತು

- ರಾಜ್ಯದಲ್ಲಿರುವ ಆಮ್ಲಜನಕ ಉತ್ಪಾದನೆ ಹಾಗೂ ಅಸೋಸಿಯೇಟ್ ಎಂಟರ್ ಪ್ರೈಸಸ್ ಗೆ ವಿಶೇಷ ಪ್ರೋತ್ಸಾಹ ನೀಡುವ ಯೋಜನೆಗೆ ಸಮ್ಮತಿ

- ಜಿಲ್ಲಾ, ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಡಿಸೆಂಬರ್ ಅಂತ್ಯದ ವರೆಗೆ ಮುಂದೂಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

- ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಸಮ್ಮತಿ

- ದಾಸನಪುರ ಉಪ ಮಾರುಕಟ್ಟೆ ಪ್ರಾಂಗಣದ 'ಇ' ಬ್ಲಾಕ್ ನಲ್ಲಿರುವ ಮಳಿಗೆ/ಉಗ್ರಾಣಗಳನ್ನು ಗುತ್ತಿಗೆ ಕಮ್ ಮಾರಾಟಕ್ಕೆ ನೀಡಲು ಪ್ರಸ್ತಾವಿತ ಮೌಲ್ಯ ಪರಿಷ್ಕರಣೆ

- ರಾಜ್ಯದ ಉದ್ಯೋಗಾಧಾರಿತ ವ್ಯಾಸಂಗ ( ಜೆಒಸಿ) ಪಿಯುಸಿಗೆ ತತ್ಸಮಾನವೆಂದು ಪರಿಗಣನೆ

- ಸನ್ನಡತೆಯ ಆಧಾರದಲ್ಲಿ 139 ಜೀವಾವಧಿ ಸಜಾ ಕೈದಿಗಳ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಶಿಫಾರಸು.

- ರಾಯಚೂರು ಜಿಲ್ಲೆ ದೇವದುರ್ಗದ ಸರ್ಕಾರಿ‌ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಂದಾಜಿಸಿದ‌ ವೆಚ್ಚ 58 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಒಪ್ಪಿಗೆ

- 2019ರ ಆಗಸ್ಟ್-ಸೆಪ್ಟಂಬರ್ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಮನೆಗಳ ಪುನರ್ ನಿರ್ಮಾಣ, ರಿಪೇರಿ ಹಾಗೂ ಮನೆ ಬಾಡಿಗೆ ಪಾವತಿಸಲು ಹೊರಡಿಸಿದ ಐದು ಆದೇಶಗಳಿಗೆ

ಘಟನೋತ್ತರ ಮಂಜೂರು

- ಕರ್ನಾಟಕ ಕಂದಾಯ ಉಪ ಶಾಖೆ ಸೇವೆಗಳು (ನೇಮಕ) ( ತಿದ್ದುಪಡಿ) ನಿಯಮಗಳು-2021ಕ್ಜೆ ಒಪ್ಪಿಗೆ

- ಬೆಳಗಾವಿ ಹಾಗೂ ಮಂಗಳೂರಿನಲ್ಲಿ ಒಟ್ಟು ‌31.66 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಕಟ್ಟಡಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ

- ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ 45.46 ಕೋಟಿ ರೂ ವೆಚ್ಚದಲ್ಲಿ 2,500 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಗಾರ ನಿರ್ಮಾಣ,

ತುಂಗಭದ್ರಾ ಕೆಳಮಟ್ಟದ ಬಾಗೇವಾಡಿ ವಿತರಣಾ ಕಾಲುವೆಯಿಂದ ಈ ಜಲಾಗಾರಕ್ಕೆ ನೀರು ಒದಗಿಸಲು ಆಡಳಿತಾತ್ಮಕ ಅನುಮೋದನೆ

- ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೆದ್ಲೇರಿ, ರಾಹುತನ ಕೆರೆ ಹಾಗೂ ಇತರ 18 ಕೆರೆಗಳನ್ನು ಭರ್ತಿ ಮಾಡುವ‌ 206 ಕೋಟಿ ರೂ ವೆಚ್ಚದ ವಿಸ್ತೃತ ಯೋಜನಾ ವರದಿ ಸ್ಥಿರೀಕರಣ

- ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದೇವಿಘಾಟ್ ಸಮೀಪದ ತುಂಗಭದ್ರಾ ನದಿಯಿಂದ ಮುಕ್ಕುಂಪಿ ಹಾಗೂ ಇತರ ಐದು ಕೆರೆಗಳನ್ನು ತುಂಬುವ 93 ಕೋಟಿ ರೂ ವೆಚ್ಚದ ವಿಸ್ತೃತ ಯೋಜನಾ ವರದಿ ಸ್ಥಿರೀಕರಣ.

- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ 1,100 ಹೆಕ್ಟೇರ್ ಪ್ರದೇಶಕ್ಕೆ ನೀರುಣ್ಣಿಸಲು ಉದ್ದೇಶಿತ‌ 240‌ ಕೋಟಿ ರೂ ವೆಚ್ಚದಲ್ಲಿ ನೇತ್ರಾವತಿ ನದಿಗೆ ಬ್ರಿಡ್ಜ್‌ ಕಮ್ ಬ್ಯಾರೇಜ್ ನಿರ್ಮಾಣದ ವಿಸ್ತೃತ ಯೋಜನಾ ವರದಿ ದೃಢೀಕರಣ.