More

    ಎರಡನೆಯ ಪತ್ನಿಯ ಮಕ್ಕಳೂ ಅನುಕಂಪದ ಹುದ್ದೆಗೆ ಅರ್ಹರು: ಹೈಕೋರ್ಟ್​ನಿಂದ ಮಹತ್ವದ ತೀರ್ಪು

    ಬೆಂಗಳೂರು: ಈ ಜಗತ್ತಿನಲ್ಲಿ ಯಾವ ಮಕ್ಕಳೂ ಅಪ್ಪ- ಅಮ್ಮ ಇಲ್ಲದೇ ಹುಟ್ಟುವುದಿಲ್ಲ. ಪಾಲಕರ ಸಂಬಂಧ ಅನಧಿಕೃತವಾಗಿರಬಹುದು. ಅಕ್ರಮ ಸಂಬಂಧದಲ್ಲಿ ಮಗು ಹುಟ್ಟಿರಬಹುದು. ಆದರೆ ಅದಕ್ಕೆ ಮಗುವನ್ನು ಹೊಣೆ ಮಾಡಲಾಗದು ಎಂದಿರುವ ಹೈಕೋರ್ಟ್​, ಎರಡನೆಯ ಪತ್ನಿಯ ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅಧಿಕಾರವಿರುತ್ತದೆ ಎಂದು ಹೇಳಿದೆ.

    ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಡವೆಕೆರೆ ನಿವಾಸಿ ಸಂತೋಷ್ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ಪೀಠ ಈ ಮಾತು ಹೇಳಿದೆ.

    ಲೈನ್‌ಮನ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 2014ರ ಜೂನ್‌ನಲ್ಲಿ ನಿಧನರಾದರು. ಅನುಕಂಪದ ಆಧಾರದಲ್ಲಿ ನೌಕರಿ ಕೋರಿ ಎರಡನೇ ಪತ್ನಿ ಮಗ ಸಲ್ಲಿಸಿದ್ದ ಅರ್ಜಿಯನ್ನು ಕೆಪಿಟಿಸಿಎಲ್‌ ತಿರಸ್ಕರಿಸಿತ್ತು. ಮೊದಲ ಪತ್ನಿ ಇದ್ದಾಗಲೇ ಎರಡನೇ ವಿವಾಹವಾದರೆ ಆ ಪತ್ನಿ ಅಧಿಕೃತ ಅಲ್ಲ. ತಾಯಿ ಅನಧಿಕೃತ ಆಗಿರುವ ಕಾರಣ ಮಗನೂ ಅನಧಿಕೃತ ಎಂಬ ಕೆಪಿಟಿಸಿಎಲ್​ ವಾದವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠ ಮಾನ್ಯ ಮಾಡಿತ್ತು. ಅದನ್ನು ಈಗ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲಾಗಿತ್ತು.

    ಮಕ್ಕಳೆಲ್ಲರೂ ಸಮಾನರು ಎಂಬ ಕಾನೂನನ್ನು ಜಾರಿಗೆ ತರಬಹುದಾಗಿದೆ. ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೂ ನ್ಯಾಯ ದೊರಕಿಸಲು ಸಂಸತ್ ಮುಂದಾಗಬೇಕಿದೆ’ ಎಂದು ಪೀಠ ಹೇಳಿತು. ಅರ್ಜಿದಾರರ ಮನವಿಯನ್ನು ಕಾನೂನಿನ ಅಡಿಯಲ್ಲಿ ಪರಿಗಣಿಸಲು ಕೆಪಿಟಿಸಿಎಲ್‌ಗೆ ಪೀಠ ನಿರ್ದೇಶನ ನೀಡಿತು.

    VIDEO: ಬಾರ್​ ಒಳಗೆ ನುಗ್ಗಿ ಗಟಗಟ ಎಣ್ಣೆ ಇಳಿಸಿದ ಕಪಿರಾಯ- ಮುಂದೇನಾಯ್ತು ನೋಡಿ…

    ಐವರು ಸಹೋದರಿಯರ ಅಪೂರ್ವ ಸಾಧನೆ: ಆಡಳಿತ ಸೇವೆ ಪರೀಕ್ಷೆಯಲ್ಲಿ ಟಾಪರ್ಸ್​!

    ನಿರುದ್ಯೋಗಿಗಳಗೆ ಗುಡ್​ನ್ಯೂಸ್ ಕೊಟ್ಟ ಸಿಎಂ: ಐದು ವರ್ಷಗಳಲ್ಲಿ 10 ದಶಲಕ್ಷ ಉದ್ಯೋಗ ಸೃಷ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts