ಜಿಲ್ಲೆ

ಮುಂದುವರೆದ ಕಲುಷಿತ ನೀರಿನ ದುರ್ಘಟನೆ: ವಿಷಜಲಕ್ಕೆ ಎಂಟನೇ ಬಲಿ- 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

suchetana

ರಾಯಚೂರು: ರಾಯಚೂರಿನಲ್ಲಿ ಕಲುಷಿತ ನೀರಿನ ಸಮಸ್ಯೆ ಮುಂದುವರೆದಿದ್ದು, ಇದಕ್ಕೆ ಇನ್ನೋರ್ವ ಮಹಿಳೆ ಬಲಿಯಾಗಿದ್ದಾರೆ. ಇದಾಗಲೇ ಕಲುಷಿತ ನೀರು ಏಳು ಮಂದಿಯನ್ನು ಬಲಿ ಪಡೆದಿದ್ದು, ಇದೀಗ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಜುಕೂರು ಗ್ರಾಮದ ಲಕ್ಷ್ಮೀ (28) ಮೃತಪಟ್ಟಿದ್ದಾರೆ.

ವಿಷ ಜಲ ಸೇವಿಸಿ ಪ್ರಾಣ ಬಿಟ್ಟಿರುವುದು ತಿಳಿದುಬಂದಿದೆ. ವಿಪರೀತ ವಾಂತಿಯಿಂದ ಲಕ್ಷ್ಮೀ ಮೃತಪಟ್ಟಿದ್ದಾರೆ. ವಿಪರೀತ ವಾಂತಿ ಭೇದಿ ಹಿನ್ನೆಲೆ ಮಟಮಾರಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಪರೀತ ವಾಂತಿ ಭೇದಿಯಿಂದ ಲೋ ಬಿಪಿ ಉಂಟಾಗಿತ್ತು. ಆಗ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸ್ಥಳೀಯ ವೈದ್ಯರು ಹೇಳಿದ್ದರು.

ಬೇರೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಲಕ್ಷ್ಮಿ ಮೃತಪಟ್ಟಿದ್ದಾರೆ. ಜುಕೂರು ಹಾಗೂ ವಲ್ಕಂದಿನ್ನಿ ಗ್ರಾಮಕ್ಕೆ ತುಂಗಭದ್ರಾ ನದಿ ನೀರೇ ಆಧಾರವಾಗಿದೆ. ತುಂಗಭದ್ರಾ ನದಿ ನೀರು ನೇರವಾಗಿ ಕಾಲುವೆಗೆ ಪೂರೈಕೆಯಾಗುತ್ತದೆ. ಕಾಲುವೆಯಿಂದ ಗ್ರಾಮದ ಟ್ಯಾಂಕ್ ಗೆ ನೀರು ಡಂಪಿಂಗ್ ಆಗಿ ಪ್ರತಿ ಮನೆಗೆ ನೀರು ಸರಬರಾಜು ಆಗುತ್ತದೆ.

ಇದೇ ನೀರು ಕಲುಷಿತಗೊಂಡ ಹಿನ್ನೆಲೆ ಸಮಸ್ಯೆ ಉಲ್ಬಣಗೊಂಡಿದೆ. ಇದೇ ವೇಳೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ವಲ್ಕಂದಿನ್ನಿ ಹಾಗೂ ಜೂಕೂರಿನಲ್ಲಿ ಕಲುಷಿತ ನೀರು ಸೇವಿಸಿ 60ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿ ಒಂದರಲ್ಲೇ ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. (ದಿಗ್ವಿಜಯ ನ್ಯೂಸ್​)