ಜಿಲ್ಲೆ

ಸಿ.ಡಿ ಬಿಡುಗಡೆಯಾಗೋದು 4 ತಿಂಗಳ ಮೊದಲೇ ಗೊತ್ತಿತ್ತು- ಯಾರ ಕೈವಾಡ ಎಂದೂ ಗೊತ್ತು ಎಂದ ಜಾರಕಿಹೊಳಿ

suchetana

ಬೆಂಗಳೂರು: ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಬಿಡುಗಡೆಯಾಗಿರುವ ಸಿ.ಡಿ ನೂರಕ್ಕೆ ನೂರರಷ್ಟು ನಕಲಿ. ನಾನು ನಿರಪರಾಧಿ. ನನ್ನುನ್ನು ಸುಮ್ಮನೇ ಈ ಕೇಸ್‌ನಲ್ಲಿ ಸಿಲುಕಿಸಿದ್ದಾರೆ. ಇದು ಬಿಡುಗಡೆಯಾಗುವುದು ನನಗೆ ನಾಲ್ಕು ತಿಂಗಳು ಮೊದಲೇ ಗೊತ್ತಿತ್ತು ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

ಸಿ.ಡಿ ಬಿಡುಗಡೆಯಾದ ನಂತರ ಎಲ್ಲಿಯೂ ಕಾಣಿಸಿಕೊಳ್ಳದಿದ್ದ ಜಾರಕಿಹೊಳಿಯವರು ಇದೀಗ ಕೇಸ್‌ ವಾಪಸಾದ ನಂತರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

10.30ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದ ಅವರು ನಿಗದಿತ ಅವಧಿಗಿಂತ ಮೊದಲೇ ಮಾಧ್ಯಮದವರ ಜತೆ ಮಾತನಾಡುತ್ತಾ, ಸಿ.ಡಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಮೇಶ್ ಜಾರಕಿಹೊಳಿ ನಡೆಸುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿತ್ತು.

ಇದು ನಕಲಿ ಸಿ.ಡಿ. ಈ ವಿಷಯ ನನಗೆ ನಾಲ್ಕು ತಿಂಗಳು ಮೊದಲೇ ತಿಳಿದಿತ್ತು. 26 ಗಂಟೆ ಮೊದಲೇ ಹೈಕಮಾಂಡ್ ಇದರ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಆ ಕ್ಷಣದಲ್ಲಿ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ಕಾನೂನು ಹೋರಾಟಕ್ಕೆ ಹೋಗಲಿಲ್ಲ. 2+3+4 ಸೇರಿ ಈ ಕೆಲಸ ಮಾಡಿದ್ದಾರೆ ಎಂದರು.

ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನ ಕೈಬಿಡಲ್ಲ. ಅವರನ್ನು ಜೈಲಿಗೆ ಹಾಕಿಸುವುದು ನನ್ನ ಗುರಿ. ಓರಿಯನ್ ಮಾಲ್ ಅಕ್ಕಪಕ್ಕ ಕೆಲಸ ಆಗಿದೆ. ನನ್ನ ಮುಗಿಸಲು ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಇದರ ಹಿಂದೆ ಡಿಕೆಶಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಇದಾರೆ ಅನ್ನೋದನ್ನ ಪರೋಕ್ಷವಾಗಿ ಹೇಳಿದರು ರಮೇಶ್ ಜಾರಕಿಹೊಳಿ.

ನನ್ನ ಧರ್ಮಪತ್ನಿ ಮತ್ತು ಸಹೋದರರು ಹಾಗೂ ರಾಜ್ಯದ ಜನತೆ ನನ್ನ ಜತೆ ಇದ್ದಾರೆ. ಅವರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ನನಗೆ ಕರೆ ಮಾಡಿ ನನಗೆ ಧೈರ್ಯ ತುಂಬಿದ್ದಾರೆ. ಇವರ ಜತೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ. ಪಕ್ಷಾತೀತವಾಗಿ ನನಗೆ ಧೈರ್ಯ ತುಂಬಿದ ಇವರಿಗೂ ನಾನು ಬಹಳ ಧನ್ಯವಾದ ಸಲ್ಲಿಸುತ್ತೇನೆ ಎಂದು ಜಾರಕಿಹೊಳಿ ಹೇಳಿದರು.

'ನಾನು ಬಹಳ ದುಃಖದಲ್ಲಿದ್ದೇನೆ'. ದಯವಿಟ್ಟು ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. 2020ರ ಫೆಬ್ರವರಿ 26ರಂದು ನಾನು ಸಚಿವನಾದೆ. 4-5 ದಿನದಿಂದ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. ರಾಜೀನಾಮೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರ ಎಂದರು.