ಜಿಲ್ಲೆ

ಮೈಸೂರು- ಬೆಂಗಳೂರು ನಡುವಿನ ರೈಲುಗಳ ಸಂಚಾರ ಆರಂಭ: ಅವುಗಳ ಮಾಹಿತಿ ಇಲ್ಲಿದೆ...

suchetana

ಮೈಸೂರು: ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಮಳೆ ಅವಾಂತರದ ಹಿನ್ನೆಲೆಯಲ್ಲಿ ಇದಾಗಲೇ ರಸ್ತೆ ಬಂದ್​ ಆಗಿದ್ದು, ನಿನ್ನೆ (ಆಗಸ್ಟ್​ 3) ರೈಲುಗಳ ಸಂಚಾರನ್ನೂ ಬಂದ್​ ಮಾಡಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.

ಮೈಸೂರು- ಬೆಂಗಳೂರು ನಡುವೆ ಎಂಟು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿತ್ತು. ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಗುಡ್ಡ ಕುಸಿತ ಸಂಭವದ ಕಾರಣ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಬಹುತೇಕ ಮೆಮು (Mainline Electric Multiple Unit-ಸಮೀಪ ಹಾಗೂ ಮಧ್ಯಮ ದೂರವನ್ನು ಕ್ರಮಿಸುವ ರೈಲು) ಹಾಗೂ ಪ್ಯಾಸೆಂಜರ್ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಉಳಿದಂತೆ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಾಸವಾಗಿದ್ದವು.

ಇದೀಗ ಎಂಟು ರೈಲುಗಳ ಆರಂಭ ಮಾಡಲಾಗಿದೆ. ಅವುಗಳ ವಿವರ ಇಲ್ಲಿದೆ:

1. ಮೆಮು ರೈಲು ಸಂಖ್ಯೆ 06525 ಬೆಂಗಳೂರಿನಿಂದ ಮೈಸೂರು.

2. ಮೆಮು ರೈಲು ಸಂಖ್ಯೆ 06526 ಮೈಸೂರಿನಿಂದ ಬೆಂಗಳೂರು.

3. ಮೆಮು ರೈಲು ಸಂಖ್ಯೆ 06255 ಬೆಂಗಳೂರಿನಿಂದ ಮೈಸೂರು.

4. ರೈಲು ಸಂಖ್ಯೆ 07328 ಚಾಮರಾಜನಗರದಿಂದ ಮೈಸೂರು.

5. ರೈಲು ಸಂಖ್ಯೆ 06560 ಮೈಸೂರಿನಿಂದ ಬೆಂಗಳೂರು.

6. ಮೆಮು ರೈಲು ಸಂಖ್ಯೆ 06255 ಬೆಂಗಳೂರಿನಿಂದ ಮೈಸೂರು.

7. ಮೈಸೂರಿನಿಂದ ಎಸ್.ಎಂ.ವಿ ಬೈಯಪನಹಳ್ಳಿ ಎಕ್ಸ್​ಪ್ರೆಸ್.​

8. ಎಸ್​ಎಂವಿ ಬೈಯಪನಹಳ್ಳಿನಿಂದ ಮೈಸೂರು ಎಕ್ಸ್​ಪ್ರೆಸ್.