ಜಿಲ್ಲೆ

ತರೀಕೆರೆ ಟು ಮಂಗಳೂರು: ಅಲ್ಲಿಂದಿಲ್ಲಿಗೆ ಬಂದು ದರೋಡೆ ಮಾಡಿ ಚಳ್ಳೇಹಣ್ಣು ತಿನ್ನಿಸ್ತಿದ್ದ ಖದೀಮರೂ ಅಂತೂ ಸಿಕ್ಕಿಬಿದ್ರು!

ಮಂಗಳೂರು: ಮಂಗಳೂರು ಪೊಲೀಸರಿಗೆ ಸವಾಲಾಗಿದ್ದ ಸರಣಿ ದೈವಸ್ಥಾನಗಳ ಕಳ್ಳತನ ಪ್ರಕರಣವನ್ನು ಕೊನೆಗೂ ಭೇದಿಸಿದ್ದಾರೆ.

13 ದೈವಸ್ಥಾನ, ದೇವಸ್ಥಾನ, 3 ಮನೆಗಳ್ಳತ‌ನ ಪ್ರಕರಣ ಭೇದಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಚಿಕ್ಕಮಗಳೂರು ತರಿಕೆರೆ ನಿವಾಸಿ ನಾಗಾನಾಯ್ಕ್, ದಾವಣಗೆರೆ ಚನ್ನಗಿರಿ ನಿವಾಸಿ ಮಾರುತಿ ಬಂಧಿತ ಆರೋಪಿಗಳು. ಇವರಿಂದ 28 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ತರೀಕೆರೆಯಿಂದ ಮಂಗಳೂರಿಗೆ ಬಂದು ಕಳ್ಳತನ ನಡೆಸಿ ಊರಿಗೆ ಪರಾರಿಯಾಗುತಿದ್ದ ಇವರನ್ನು ಹಿಡಿಯುವುದೇ ದೊಡ್ಡ ಸವಾಲಾಗಿತ್ತು. ಕೊನೆಗೂ ಇವರಿಗೆ ಬಲೆ ಬೀಸಿರುವ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಗಲು ಓಡಾಟ ನಡೆಸುತ್ತಿದ್ದ ಇವರು ಒಂಟಿ ಮನೆ , ದೈವಸ್ಥಾನಗಳನ್ನು ಗುರುತಿಸಿ ರಾತ್ರಿ ಕೃತ್ಯ ಎಸಗುತ್ತಿದ್ದವನು ನಾಗಾ ನಾಯ್ಕ್, ನಂತರ ಕದ್ದಿರುವ ಚಿನ್ನಾಭರಣವನ್ನು ಮಾರುತಿ ಮಾರಾಟ ಮಾಡುತ್ತಿದ್ದರು. ಹಲವಾರು ತಿಂಗಳುಗಳಿಂದ ನಿರಾತಂಕವಾಗಿ ಈ ಕಳ್ಳತನ ನಡೆದಿತ್ತು. ಅದರೆ ಪೊಲೀಸರಿಗೆ ಮಾತ್ರ ಇವರು ಸಿಗುತ್ತಿರಲಿಲ್ಲ. (ದಿಗ್ವಿಜಯ ನ್ಯೂಸ್‌)