ಮಂಡ್ಯ: ಮಂಡ್ಯದ ತಗ್ಗಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲರಾಗಿದ್ದ ಅಲ್ತಾಫ್ ಮೆಹದಿ ಅವರ ಸಾವಿನ ರಸಹ್ಯವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ. ಇದು ಆಕಸ್ಮಿಕ ಸಾವಲ್ಲ, ಬದಲಿಗೆ ಪತ್ನಿಯೇ ಕೊಲೆಗಾತಿ ಎನ್ನುವುದು ಬೆಳಕಿಗೆ ಬಂದಿದೆ.
56 ವರ್ಷದ ಅಲ್ತಾಫ್ ಅವರು ಮಲಗಿದ್ದಲ್ಲಿಯೇ ಶವವಾಗಿದ್ದರು. ಹೃದಯಾಘಾತದಿಂದ ಪತಿ ಮೃತಪಟ್ಟಿರುವುದಾಗಿ ಪತ್ನಿ ರಿಜ್ವಾನಬಾನು ಹೇಳಿಕೆ ನೀಡಿದ್ದರು. ಆದರೆ ಮೃತದೇಹದ ಮೇಲಿದ್ದ ರಕ್ತದ ಕಲೆ ನೋಡಿ ಸಂಬಂಧಿಕರು ಅನುಮಾನಗೊಂಡು ದೂರು ದಾಖಲು ಮಾಡಿದ್ದರು.
ಇದರ ಬೆನ್ನತ್ತಿ ಹೋದಾಗ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಗಂಡನನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.ಉಸಿರುಗಟ್ಟಿಸಿ ಕೊಂದು ಹೃದಯಾಘಾತದ ಕಥೆ ಕಟ್ಟಿರುವುದು ತನಿಖೆಯಿಂದ ಬಯಲಾಗಿದೆ.
ಜು.29ರಂದು ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಈ ಕೊಲೆ ನಡೆದಿತ್ತು. 2 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ರಿಜ್ವಾನಾಗೆ 27 ವರ್ಷದ ರೆಹಮತ್ ಉಲ್ಲಾ ಪರಿಚಯವಾಗಿದ್ದ. ವಯಸ್ಸಿಗೆ ಬಂದ ಮೂವರು ಮಕ್ಕಳಿದ್ದರೂ ಮಗನ ವಯಸ್ಸಿನವನ ಜತೆ ಅಕ್ರಮಸಂಬಂಧ ಹೊಂದಿರುವ ಆರೋಪ ರಿಜ್ವಾನ್ ಮೇಲಿದೆ.
ದಾವಣಗೆರೆ ಜಿಲ್ಲೆ ಹರಿಹರದ ರಹಮತ್ಉಲ್ಲಾಗೆ ಮಂಡ್ಯದಲ್ಲಿ ಟೈಲ್ಸ್ ಅಂಗಡಿ ಇಟ್ಟಕೊಟ್ಟಿದ್ದಳು ರಿಜ್ವಾನ. ಟೈಲ್ಸ್ ಅಂಗಡಿ ಕೆಲಸಕ್ಕೆ ಹೋಗುವ ನೆಪದಲ್ಲಿ ರಹಮತ್ ಜೊತೆ ಕಾಮದಾಟಕ್ಕಿಳಿದಿದ್ದಳು. ವಿಷಯ ತಿಳಿದು ಹಲವು ಬಾರಿ ರಾಜಿ- ಪಂಚಾಯ್ತಿ ಠಾಣೆ ಮೆಟ್ಟಿಲೇರಿದ್ದರು ಪತಿ ಅಲ್ತಾಫ್. ಆದರೂ ಯಾವುದನ್ನು ಲೆಕ್ಕಿಸದೇ ಪ್ರಿಯಕರನ ಜೊತೆ ಸಂಬಂಧ ಮುಂದುವರೆಸಿದ್ದಳು ಪತ್ನಿ.
ಇದೀಗ ಅಕ್ರಮಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಮುಗಿಸುವ ಪ್ಲ್ಯಾನ್ ಮಾಡಿದ ಆಕೆ ಪ್ರಿಯಕರನ ಜತೆಗೂಡಿ ಜು.29ರಂದು ಮಧ್ಯರಾತ್ರಿ ದಿಂಬು ರಗ್ಗಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.