ಜಿಲ್ಲೆ

ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​

suchetana

ಬೆಂಗಳೂರು: ನಗರದ ಎಟಿಎಂ ಒಂದಕ್ಕೆ ಹಣ ಹಾಕುವ ಸಂಬಂಧ ವಾಹನದಲ್ಲಿ ತಂದಿದ್ದ 65 ಲಕ್ಷ ರೂಪಾಯಿಯೊಂದಿಗೆ ನಾಪತ್ತೆಯಾಗಿದ್ದ ಇದೇ ವಾಹನದ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಎರಡು ವಾರಗಳ ಹಿಂದೆ ಯೋಗೇಶ್​ ಎಂಬಾತ ಹಣದೊಂದಿಗೆ ಪರಾರಿಯಾಗಿದ್ದ. ಗನ್ ಮ್ಯಾನ್ ಮತ್ತು ಮ್ಯಾನೇಜರ್ ಎಟಿಎಂಗೆ ದುಡ್ಡು ಹಾಕಲು ಒಳಗೆ ಹೋಗಿದ್ದಾಗ ಹೊರಗಡೆ ಇದ್ದ 65 ಲಕ್ಷ ರೂಪಾಯಿಗಳನ್ನು ಎತ್ತುಕೊಂಡು ಹೋಗಿದ್ದ ಯೋಗೇಶ್​.

ಈತನಿಗಾಗಿ ಶೋಧ ಕಾರ್ಯ ನಡೆಸಿರುವ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ. ಅದೇನೆಂದರೆ ಈತ ಎಟಿಎಂಗೆ ಹಾಕಬೇಕಿದ್ದ ಹಣದ ಜತೆ ತನ್ನ ಅತ್ತೆ ಮಗಳ ಜತೆ ಪರಾರಿಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ. ಗಂಡನನ್ನು ಬಿಟ್ಟಿದ್ದ ಅತ್ತೆ ಮಗಳ ಜತೆ ಸಂಬಂಧ ಹೊಂದಿದ್ದ ಎರಡು ಮಕ್ಕಳ ತಂದೆ ಯೋಗೇಶ್​ ಆಕೆಯ ಜತೆ ಪ್ರತ್ಯೇಕ ಸಂಸಾರ ನಡೆಸಲು ಹಣವನ್ನು ಕದ್ದಿರುವುದು ಪೊಲೀಸರ ತನಿಖೆಯಿಂದ ಬಯಲುಗೊಂಡಿದೆ.

ಎಟಿಎಂಗೆ ಹಾಕಬೇಕಿದ್ದ 65 ಲಕ್ಷ ರೂಪಾಯಿಯೊಂದಿಗೆ ಆಟೋದಲ್ಲಿ ಹೋಗಿರುವುದನ್ನು ಪೊಲೀಸರು ಸಿಸಿಟಿವಿ ಸಹಾಯದಿಂದ ಹೋಗಿದ್ದಾರೆ. ಸ್ವಲ್ಪ ದೂರ ಆಟೋದಲ್ಲಿ ಹೋಗಿರುವ ಈತ ನಂತರ ತನ್ನ ಲವರ್​ ಅನ್ನು ಅದೇ ಆಟೋಗೆ ಹತ್ತಿಸಿಕೊಂಡು ಪರಾರಿಯಾಗಿದ್ದಾನೆ.

ಸದ್ಯ ಇಬ್ಬರ ಫೋನ್​ ಸ್ವಿಚ್ ಆಫ್ ಆಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಉತ್ತರ ಭಾರತದ ಕಡೆ ಪರಾರಿಯಾಗಿರವ ಬಗ್ಗೆ ತಮಗೆ ಮಾಹಿತಿ ಸಿಕ್ಕಿದೆ. ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಹುಡುಕಾಟ ನಡೆಸಿದ್ದೇವೆ ಎಂದು ಸುಬ್ರಹ್ಮಣ್ಯ ನಗರ ಪೊಲೀಸರು ಹೇಳಿದ್ದಾರೆ.