ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳ ಪರೀಕ್ಷೆಗಳನ್ನು ಮುಂದೂಡಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆ ಪ್ರಕಾರವಾಗಿ ಪದವಿ ಮಟ್ಟದ ವಿದ್ಯಾರ್ಹತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಡಿ.5 ಮತ್ತು ಕಡ್ಡಾಯ ಭಾಷಾ ಪರೀಕ್ಷೆಯನ್ನು ಡಿ.4 ರಂದು ನಡೆಸಲು ನಿರ್ಧರಿಸಿದೆ. ಪದವಿಗಿಂತ ಕೆಳ ಮಟ್ಟದ ವಿದ್ಯಾರ್ಹತೆ ಪರೀಕ್ಷೆಯನ್ನು ಈ ಹಿಂದೆಯಂತೆಯೇ ಡಿ.19ರಂದು ನಡೆಸಲಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಇಲಾಖೆ http://kpsc.kar.nic.in/ ವೆಬ್‌ಸೈಟ್‌ನಲ್ಲಿ ನೋಡಬಹುದು.