ಜಿಲ್ಲೆ

ಮೇಕೆದಾಟು ಯೋಜನೆಯ ಸ್ಫೋಟಕ ಮಾಹಿತಿ ಇದೆ- ಒಂದೇ ವಾರದಲ್ಲಿ ಸಾಕ್ಷಿಸಹಿತ ಬರುವೆ ಎಂದ ಸಚಿವ ಕಾರಜೋಳ

suchetana

ಬೆಂಗಳೂರು: 2013ರಿಂದ 2018ರವರೆಗೆ ಕಾಂಗ್ರೆಸ್‌ನವರ ಆಡಳಿತದಲ್ಲಿನ ಮೇಕೆದಾಟು ವಿಚಾರದಲ್ಲಿ ಹೊಣೆಗೇಡಿತನದ ಸಾಕ್ಷಿ ಸಮೇತ ಹೊರಗೆ ಹಾಕುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಇದು ವೈಯಕ್ತಿಕವಾಗಿ ಯಾರ ವಿರುದ್ಧವೂ ಅಲ್ಲ, ಅವರ ಅವಧಿಯಲ್ಲಿನ ಹೊಣೆಗೇಡಿತನವನ್ನು ಜನವರಿ ಒಂಬತ್ತರೊಳಗೆ ಬಹಿರಂಗ ಮಾಡುತ್ತೇನೆ ಎಂದಿದ್ದಾರೆ. ಸದ್ಯ ಈ ಪ್ರಕರಣ 3ರಂದು ಪ್ರಕರಣ ಸುಪ್ರಿಂಕೋರ್ಟ್ ಮುಂದೆ ಬರಲಿದೆ. ಹೀಗಾಗಿ ಈಗ ಹೆಚ್ಚಿಗೆ ಮಾತನಾಡಲ್ಲ. ಆಮೇಲೆ ಸಾಕ್ಷಿ ಸಹಿತ ವಿಷಯ ಬಹಿರಂಗಪಡಿಸುವೆ ಎಂದಿದ್ದಾರೆ.

ಈ ವಿಷಯದಲ್ಲಿ ಹಲವು ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ, ನಾವು ರಾಜಕೀಯ ಮಾಡಲ್ಲ, ವಾಸ್ತವಾಂಶವನ್ನು ಜನರ ಮುಂದೆ ಇಡುತ್ತೇವೆ. ಕಾಂಗ್ರೆಸ್‌ನವರ ಪಾದಯಾತ್ರೆ ಅಧಿಕಾರಕ್ಕಾಗಿ ಖುರ್ಚಿಗಾಗಿ ನಡೆಯುವ ಹೋರಾಟ, ಲೀಡರ್ ಆಗಿ ಹೊರಹೊಮ್ಮಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ಕಾರಜೋಳ ಖಾರವಾಗಿ ನುಡಿದರು.

ಸಿಂದಗಿ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ತಮ್ಮ ಮನಸ್ಥಿತಿ ಹೊರಹಾಕಿದರು. ಹೊಟ್ಟೆ ಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಎಂದಿದ್ದರು. ಸಿದ್ದರಾಮಯ್ಯ ಈ ಮಟ್ಟಿಗೆ ಮಾತನಾಡುತ್ತಾರೆ ಎಂದುಕೊಂಡಿರಲಿಲ್ಲ. ದೀನ ದಲಿತರ ಬಗ್ಗೆ ಕೆಟ್ಟ ಮನಸ್ಥಿತಿ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ದಲಿತ ಸಮುದಾಯ ಪಾಠ ಕಲಿಸಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.