ಜಿಲ್ಲೆ

ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ: ಯಾರೀ ಉಡುಪಿ ಮೂಲದ ಬೆಡಗಿ?

ಮುಂಬೈ: ಮುಂಬೈನಲ್ಲಿ ನಡೆದ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕದ ಸಿನಿ ಶೆಟ್ಟಿ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022' ಪ್ರಶಸ್ತಿ ಗೆದ್ದಿದ್ದಾರೆ. ಮುಂಬೈನ ಜಿಯೋ ವಲ್ಡ್‌ ಕನ್ವೆಂನ್ಷನ್ ಸೆಂಟರ್ ನಲ್ಲಿ ಈ ಸ್ಪರ್ಧೆಯಲ್ಲಿ ಸುಂದರಿ ಪಟ್ಟವನ್ನು ಮುಡಿಲಿಗೇರಿಸಿಕೊಂಡಿದ್ದಾರೆ ಉಡುಪಿ ಜಿಲ್ಲೆ ಕಾಪು ತಾಲೂಕು ಇನ್ನಂಜೆ ಮೂಲದ 21ರ ಬೆಡಗಿ ಸಿನಿ.

ಒಟ್ಟು 31 ಫೈನಲಿಸ್ಟ್‌ಗಳನ್ನು ಹಿಂದಿಕ್ಕಿದ ಸಿನಿ, ಕಿರೀಟ ತಮ್ಮದಾಗಿಸಿಕೊಂಡರು. ಮಿಸ್ ಇಂಡಿಯಾ 2020ರ ವಿತೇಜೆ ತೆಲಂಗಾಣದ ಮಾನಸಾ ವಾರಣಾಸಿ ಸಿನಿ ಶೆಟ್ಟಿಗೆ ಮಿಸ್​ ಇಂಡಿಯಾ ಕಿರೀಟ ಹಸ್ತಾಂತರಿಸಿದರು.

ಫೆಮಿನಾ ಮಿಸ್ ಇಂಡಿಯಾ ಸಂಸ್ಥೆಯು ಭಾನುವಾರ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಆಗಿದ್ದು, ಮೊದಲ ರನ್ನರ್ ಅಪ್ ಆಗಿ ರೂಬಲ್ ಶೇಖಾವತ್ ಮತ್ತು ಎರಡನೇ ರನ್ನರ್ ಅಪ್ ಆಗಿ ಶಿನಾತಾ ಚೌಹಾನ್ ಗೆದ್ದು ಬೀಗಿದ್ದಾರೆ ಎಂದು ತಿಳಿಸಿದೆ.

ಫೆಮಿನಾ ಮಿಸ್ ಇಂಡಿಯಾ ಸಂಸ್ಥೆಯು ಭಾನುವಾರ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಆಗಿದ್ದು, ಮೊದಲ ರನ್ನರ್ ಅಪ್ ಆಗಿ ರೂಬಲ್ ಶೇಖಾವತ್ ಮತ್ತು ಎರಡನೇ ರನ್ನರ್ ಅಪ್ ಆಗಿ ಶಿನಾತಾ ಚೌಹಾನ್ ಗೆದ್ದು ಬೀಗಿದ್ದಾರೆ ಎಂದು ತಿಳಿಸಿದೆ.

ಕರ್ನಾಟಕ ಮೂಲದ ಸಿನಿ ಶೆಟ್ಟಿ ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅಕೌಂಟ್ಸ್​ ಮತ್ತು ಫೈನಾನ್ಸ್ ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. ಸದ್ಯ ಅವರು ಸಿಎಫ್ ಎ (ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್​) ಕೋರ್ಸ್ ಮಾಡುತ್ತಿದ್ದಾರೆ. ಇನ್ನು ಇವರು ಭರತನಾಟ್ಯ ಹಾಗೂ ಬೇರೆ ಶೈಲಿಯ ನೃತ್ಯದಲ್ಲೂ ಆಸಕ್ತಿ ಹೊಂದಿದ್ದು, ತರಬೇತಿ ಪಡೆದಿದ್ದಾರೆ. ತಮ್ಮ 4ನೇ ವಯಸ್ಸಿನಲ್ಲೇ ನೃತ್ಯಾಭ್ಯಾಸ ಶುರು ಮಾಡಿದ್ದರು. 14ನೇ ವಯಸ್ಸಿನವರೆಗೂ ಅನೇಕ ವೇದಿಕೆಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ.

ತೀರ್ಪುಗಾರರ ಸಮಿತಿಯಲ್ಲಿ ಚಿತ್ರ ತಾರೆಯರಾದ ಮಲೈಕಾ ಅರೋರಾ, ನೇಹಾ ಧೂಪಿಯಾ, ಡಿನೋ ಮೋರಿಯಾ, ರಾಹುಲ್ ಖನ್ನಾ, ರೋಹಿತ್ ಗಾಂಧಿ ಮತ್ತು ಶಮಕ್ ಡಾಬರ್ ಇದ್ದರು.

ಇನ್ನು ಫೆಮಿನಾ ಮಿಸ್ ಇಂಡಿಯಾದ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ರೂಬಲ್ ಶೇಖಾವತ್ ಮೂಲತಃ ರಾಜಸ್ಥಾನದವರು. ಅಲ್ಲದೇ, ಅವರು ರಾಜಮನೆತನದ ಹಾಗೂ ಶ್ರೀಮಂತ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದಾರೆ. ರೂಬಲ್​ ನೃತ್ಯ, ನಟನೆ ಮತ್ತು ಚಿತ್ರಕಲೆ ಸೇರಿದಂತೆ ವಿವಿಧ ಹಲವು ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಈ ಸಂಬಂಧಿತ ಕ್ಷೇತ್ರದಲ್ಲಿ ಪರಿಣತಿ ಪಡೆದಿದ್ದಾರೆ. ಈಕೆ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದಾರೆ.