ಜಿಲ್ಲೆ

15 ಸಾವಿರ ರೂ. ನಾಯಿಗಾಗಿ 66 ಲಕ್ಷ ರೂ. ಟೋಪಿ ಹಾಕಿಸಿಕೊಂಡ ಬೆಂಗಳೂರು ಮಹಿಳೆ!

ಬೆಂಗಳೂರು: ಆನ್‌ಲೈನ್‌ನಲ್ಲಿ ನಾಯಿ ಕೊಳ್ಳಲು ಹೋಗಿ ಮಹಿಳೆಯೊಬ್ಬರು 66 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡೆಹ್ರಾಡೂನ್​​ ಮೂಲದ 50 ವರ್ಷದ ಮಹಿಳೆ ಗೋಲ್ಡನ್​ ರಿಟ್ರೈವರ್​ ತಳಿಯ ನಾಯಿ ಕೊಳ್ಳಲು ಹೋಗಿ ಮೋಸ ಹೋಗಿದ್ದಾರೆ.

ಸದ್ಯ ಇವರು ಪೊಲೀಸರಿಗೆ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಉತ್ತರಾಖಂಡ್​ ಪೊಲೀಸರು ಡಿಂಗ್​ ಬೋಗ್ಬಾ ಕ್ಲಾವ್ಸ್​ ಅಲಿಯಾಸ್​ ಬಾಬಿ ಇಬ್ರಾಹಿಂನನ್ನು ಬಂಧಿಸಿದ್ದಾರೆ. ಬಾಬಿಯನ್ನು ಡೆಹ್ರಾಡೂನ್​ಗೆ ಕರೆತರಲಾಗಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಮಹಿಳೆಯರು ಆನ್‌ಲೈನ್‌ನಲ್ಲಿ ಗೋಲ್ಡನ್​ ರಿಟ್ರೈವರ್​ ತಳಿಯ ನಾಯಿಗೆ ಹುಡುಕಾಟ ನಡೆಸಿದ್ದರು. ಮಗಳಿಗೆ ಜನ್ಮದಿನದಂದು ಉಡುಗೊರೆ ರೂಪದಲ್ಲಿ 15 ಸಾವಿರ ರೂ. ಮೌಲ್ಯದ ಶ್ವಾನವನ್ನು ಖರೀದಿಸಬೇಕೆಂದುಕೊಂಡಿದ್ದರು ಆಗ ಅಲ್ಲಿ ಪರಿಚಯವಾಗಿದ್ದು, ಬಾಬಿ ಇಬ್ರಾಹಿಂ, ಇಂಥ ಬಲಿಪಶುಗಳಿಗಾಗಿ ಕಾಯುತ್ತಿದ್ದ ಇಬ್ರಾಹಿಂ, ತಾನು ಉತ್ತಮ ತಳಿಯ ನಾಯಿ ಕೊಡುವುದಾಗಿ ಹೇಳಿದ್ದಾನೆ ನಂತರ ಸ್ವಲ್ಪ ಸ್ವಲ್ಪ ಹಣ ಪಡೆದುಕೊಂಡು ಪುಸಲಾಯಿಸಿ 66 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾನೆ.

66 ಲಕ್ಷ ರೂ. ಕಳೆದುಕೊಂಡ ಮೇಲೆ ಮಹಿಳೆಗೆ ತಾವು ಮೋಸ ಹೋಗಿರುವುದು ತಿಳಿದಿದೆ. ನಂತರ ಅವರು ದೂರು ದಾಖಲು ಮಾಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಹಲವಾರು ಮೊಬೈಲ್ ಫೋನ್​, ಲ್ಯಾಪ್​ಟಾಪ್​, ಎಟಿಎಂ ಕಾರ್ಡ್​ಗಳನ್ನು ವಶಕ್ಕೆ ಪಡೆಯಲಾಗಿದೆ.