ಜಿಲ್ಲೆ

ಅಮಾನತುಗೊಂಡ ಧಾರವಾಡದ ಕಾನ್ಸ್​ಟೆಬಲ್ ಮನೆಯಲ್ಲಿ ಗಾಂಜಾ ಪತ್ತೆ

suchetana

ಧಾರವಾಡ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಪೊಲೀಸ್​ ಕಾನ್ಸ್​ಟೆಬಲ್​ ಮನೆಯ ಮೇಲೆ ದಾಳಿ ನಡೆಸಿರುವ ಪೊಲೀಸರು 283 ಗ್ರಾಂ ಗಾಂಜಾ 1 ಮೊಬೈಲ್ ಫೋನ್​ ಅನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಸಂಜು ಪಾಟೀಲ್ (30) ಎಂಬುವವರ ಬಂಧಿತ ಆರೋಪಿ. ಮೂಲತ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕನದಾಳ ಗ್ರಾಮದ ನಿವಾಸಿಯಾಗಿರುವ ಇವರು, ಬೆಂಗಳೂರಿನ ಠಾಣೆಯೊಂದರಲ್ಲಿ ಕಾನ್ಸಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಈ ವೇಳೆ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಧಾರವಾಡ ಮುರಘಾಮಠದ ಹತ್ತಿರ ಮನೆ ಮಾಡಿಕೊಂಡಿದ್ದ ಸಂಜು ಅವರ ಮೇಲೆ ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದ್ದರು.

ಧಾರವಾಡ ಉಪನಗರ ಪೊಲೀಸರು ಮನೆಯಲ್ಲಿ ಶೋಧ ಮಾಡಿದಾಗ ಸಿಕ್ಕ ಗಾಂಜಾ ಸಿಕ್ಕಿದೆ. ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ದಿಗ್ವಿಜಯ ನ್ಯೂಸ್​)