ಜಿಲ್ಲೆ

ಅನಂತಪದ್ಮನಾಭನ ಗರ್ಭಗುಡಿಗೆ ಬಂದ ಮೊಸಳೆ: ಇದೊಂದು ಪವಾಡ ಎಂದ ಭಕ್ತರು

suchetana

ಕಾಸರಗೋಡು: ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿರುವ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

ಈ ದೇವಸ್ಥಾನ ಕೆರೆಯ ಮಧ್ಯದದಲ್ಲಿದ್ದು, ಮಂಗಳೂರಿನಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿ ಈ ದೇವಸ್ಥಾನವಿದೆ. ಕೆರೆಯ ಮಧ್ಯೆ ನಿಂತಿರುವುದರಿಂದ ಈ ದೇಗುಲದ ಸೌಂದರ್ಯ ಹಾಗೂ ಇಲ್ಲಿಯ ವಾತಾವರಣದಿಂದಾಗಿ ಇದು ಪ್ರಸಿದ್ಧಿ ಪಡೆದಿದೆ.

ಈ ಮೊಸಳೆ ಬಹಳ ವರ್ಷಗಳಿಂದ ದೇಗುಲದ ಕೆರೆಯಲ್ಲಿಯೇ ವಾಸವಾಗಿದೆ. ಇದಕ್ಕೆ ಬಬಿಯಾ ಎಂದು ಹೆಸರು ಇಡಲಾಗಿದೆ. ಆದರೆ ಇದೆಂದೂ ಕೆರೆ ಬಿಟ್ಟು ಮೇಲೆ ಬಂದಿರಲಿಲ್ಲ. ಆದರೆ ದೇಗುಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಬಬಿಯಾ ಗರ್ಭಗುಡಿ ಒಳಗೆ ಪ್ರವೇಶಿಸಿರುವುದು ಅಚ್ಚರಿ ಮೂಡಿಸಿದೆ. ಇದೊಂದು ಪವಾಡ ಎನ್ನುತ್ತಿದ್ದಾರೆ ಭಕ್ತರು.

ಈ ಮೊಸಳೆಗೆ ಪ್ರತಿದಿನ ದೇವರಿಗಿಟ್ಟ ಅಣ್ಣ ನೈವೇದ್ಯವನ್ನು ನೀಡಲಾಗುತ್ತದೆ. ದೇಗುಲದ ಅರ್ಚಕರು ಪೂಜೆಯ ಬಳಿಕ ಬಬಿಯಾ ಎಂದು ಕರೆದಾಗ ಮೊಸಳೆ ಕೆರೆಯಿಂದ ಸ್ವಲ್ಪ ಮೇಲಕ್ಕೆ ಬಂದು ಅನ್ನ ಪ್ರಸಾದ ಸೇವಿಸುತ್ತದೆ. ಆದರೆ ಕೆರೆಬಿಟ್ಟು ಹೋರಬಂದಿರಲಿಲ್ಲ.

ಈ ಮೊಸಳೆ ಬಹಳ ವರ್ಷಗಳಿಂದ ದೇಗುಲದ ಕೆರೆಯಲ್ಲಿದ್ದು, ಅದು ಇಲ್ಲಿವರೆಗೆ ಯಾವುದೇ ಜೀವಿಗಳಿಗೆ ಹಾನಿ ಮಾಡಿದ ಉದಾಹರಣೆಗಳೇ ಇಲ್ಲ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.