ಜಿಲ್ಲೆ

VIDEO: ಮುಖ್ಯಮಂತ್ರಿ ಬೊಮ್ಮಾಯಿ ಮಂಡಿನೋವಿಗೆ ನಾಟಿ ಚಿಕಿತ್ಸೆ ವಿಡಿಯೋ ವೈರಲ್‌

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಂಡಿ ನೋವಿನ ಸಮಸ್ಯೆ ಕಾಣಿಸಿಕೊಂಡಿರುವುದು ಭಾರಿ ಸುದ್ದಿಯಾಗಿತ್ತು. ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಅದರೆ ಇದೀಗ ಮುಖ್ಯಮಂತ್ರಿಗಳು ಮೈಸೂರು ಮೂಲದ ಪ್ರಖ್ಯಾತ ನಾಟಿ ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಕೂಡ ಮಂಡಿ ನೋವಿನ ಸಮಸ್ಯೆ ಬಾಧಿಸಿದ್ದ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದ್ದ ನಾಟಿ ವೈದ್ಯ ಲೋಕೇಶ್ ಅವರಿಂದ ಬಸವರಾಜ ಬೊಮ್ಮಾಯಿಯವರು ಕೂಡ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ಫೋಟೋ ಇದೀಗ ವೈರಲ್‌ ಆಗಿದೆ.

ನಾಟಿ ವೈದ್ಯರಾಗಿರುವ ಲೋಕೇಶ್‌ ಅವರು ಬ್ಲ್ಯಾಕ್ ಫಂಗಸ್‌ಗೆ ಒಳಗಾದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಿ ಗುಣಮುಖಗೊಳಿಸಿ ಪ್ರಸಿದ್ಧಿ ಪಡೆದಿದ್ದಾರೆ. ಈ ಬಗ್ಗೆ ಲಕ್ಷಣ ಸವದಿಯವರು ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ್ದರು. ಲೋಕೇಶ್‌ ಅವರು ಇದಾಗಲೇ ಬ್ಲ್ಯಾಕ್‌ ಫಂಗಸ್‌ ಮಾತ್ರವಲ್ಲದೇ ಕ್ಯಾನ್ಸರ್, ಕರೊನಾ ಸೇರಿದಂತೆ ವಿವಿಧ ಕಾಯಿಲೆಗಳಿಗೆ ನಾಟಿ ಔಷಧ ನೀಡಿದ್ದಾರೆ. ಅವರಿಂದಲೇ ಈಗ ಮಂಡಿ ನೋವಿನ ಚಿಕಿತ್ಸೆಯನ್ನು ಮುಖ್ಯಮಂತ್ರಿಗಳು ಪಡೆಯುತ್ತಿದ್ದಾರೆ.

ಬಸವರಾಜ ಬೊಮ್ಮಾಯಿಯವರು ಸದ್ಯ ಗುಣಮುಖರಾಗುತ್ತಿದ್ದು, ಅವರಿಗೆ ದಿನಕ್ಕೆ ಎರಡು ಬಾರಿ ಔಷಧದ ಜೊತೆಗೆ ಮೂಳೆಗಳು ಕ್ಯಾಲ್ಶಿಯಂ ಹೆಚ್ಚಿಸುವ ಹಾಗೂ ವಿಟಮಿನ್ ಡಿ ಅಪಾರ ಪ್ರಮಾಣದಲ್ಲಿ ಇರುವ ಮೇಕೆ ಹಾಲು ಕುಡಿಯುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.