ಜಿಲ್ಲೆ

VIDEO: ಕರ್ತವ್ಯದ ಹೊತ್ತಲ್ಲೇ ಸಿಸಿಬಿ ಪೊಲೀಸರ ಗುಂಡು ಪಾರ್ಟಿ- ವಿಡಿಯೋ ವೈರಲ್​

suchetana

ಮಂಗಳೂರು: ಕರ್ತವ್ಯದ ಸಮಯದಲ್ಲಿಯೇ ಮಂಗಳೂರಿನ ಸಿಸಿಬಿ ಪೊಲೀಸರು ಬಾರ್​ ಒಂದರಲ್ಲಿ ಮದ್ಯಸೇವನೆ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ.

ಮಂಗಳೂರು ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಈ ಪಾರ್ಟಿ ನಡೆದಿರುವುದಾಗಿ ಆರೋಪಿಸಲಾಗಿದೆ. ಮಂಗಳೂರು ಹೊರವಲಯದ ಕುತ್ತಾರು ಬಳಿ ಇರುವ ಬಾರ್ ಒಂದರಲ್ಲಿ ಗುಂಡಿನ ಮತ್ತಿನಲ್ಲಿ ಪೊಲೀಸರು ತೇಲಿರುವುದು ಕಂಡುಬಂದಿದೆ. ಊಟಕ್ಕೆ ಹೋಗಿದ್ದ ವೇಳೆ ಮದ್ಯಪಾನ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಜೊತೆ ಹಾಡಹಗಲೇ ಪಾರ್ಟಿ ಮಾಡಿರುವ ಆರೋಪ ಸದ್ಯ ಇವರ ಮೇಲಿದೆ. ಬಾರ್ ಹೊರಗೆ ಸರ್ಕಾರಿ ಟಿ.ಟಿ ವಾಹನ ನಿಲ್ಲಿಸಿ ಬಾರ್​ ಒಳಗೆ ಹೋಗಿರುವ ಪೊಲೀಸರು ಅಲ್ಲಿ ಪಾರ್ಟಿ ನಡೆಸಿದ್ದಾರೆ. ಮಂಗಳೂರು ಸಿಸಿಬಿಯ ಎಂಟು ಮಂದಿ ಸಿಬ್ಬಂದಿ ಈ ಪಾರ್ಟಿಯಲ್ಲಿ ಭಾಗವಹಿಸಿರುವುದಾಗಿ ಹೇಳಲಾಗಿದೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಮಂಗಳೂರು ಕಮಿಷನರ್ ಶಶಿಕುಮಾರ್ ತನಿಖೆಗೆ ಆದೇಶಿಸಿದ್ದಾರೆ. ಪಾರ್ಟಿ ನಡೆಸುತ್ತಿದ್ದ ಈ ಎಂಟು ಮಂದಿ ಸಿಸಿಬಿ ಪೊಲೀಸರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಿದ ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.