ಜಿಲ್ಲೆ

VIDEO: ಕರೊನಾ ಎಲ್ಲಿದೆ? ಶಾಸಕರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಭರ್ಜರಿ ಎಮ್ಮೆ ಸ್ಪರ್ಧೆ- ಎಲ್ಲೆಡೆ ಆಕ್ರೋಶ

suchetana

ಬೆಳಗಾವಿ: ಕೋವಿಡ್‌ ನಿಯಮ ಪಾಲನೆ ಮಾಡಿ, ಯಾವುದೇ ಸಭೆ ಸಮಾರಂಭ ನಡೆಸಬೇಡಿ ಎಂದು ಸರ್ಕಾರ ಘೋಷಣೆ ಮಾಡುತ್ತಲೇ ಇದೆ, ಈ ಬಗ್ಗೆ ಹೈಕೋರ್ಟ್‌ ಕೂಡ ಚಾಟಿ ಬೀಸಿದೆ. ಇಷ್ಟಾದರೂ ಇದೀಗ ಬೆಳಗಾವಿಯಲ್ಲಿ ಭಾರಿ ಜನರ ನಡುವೆ ಎಮ್ಮೆ ಓಟದ ಸ್ಪರ್ಧೆ ನಡೆದಿದ್ದು ಜನಸಾಮಾನ್ಯರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ವೀಕೆಂಡ್‌ ವೀಕೆಂಡ್ ಕರ್ಫ್ಯೂ, ಕರೊನಾ ಮಾರ್ಗಸೂಚಿ ಉಲ್ಲಂಘಿಸಿ ಬೆಳಗಾವಿಯ ಬಿಜೆಪಿ ಶಾಸಕ ಅನಿಲ್ ಬೆನಕೆ, ಎಮ್ಮೆ ಓಡಿಸುವ ಸ್ಪರ್ಧೆ ನಡೆಸಿದ್ದಾರೆ. ಮಕರ ಸಂಕ್ರಾಂತಿ ನಿಮಿತ್ತ ಈ ಸ್ಪರ್ಧೆ ನಡೆದಿದ್ದು, ಅದಕ್ಕೆ ಶಾಸಕತೇ ಚಾಲನೆ ನೀಡಿದ್ದಾರೆ. ಈ ಎಮ್ಮೆ ಓಡಿಸುವ ಸ್ಪರ್ಧೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜನರಿಗೆ ತಿಳಿವಳಿಕೆ ಕೊಡಬೇಕಾದ ಜನಪ್ರತಿನಿಧಿಯೇ ಈ ರೀತಿ ಮಾಡಿರುವುದಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ಜತೆಗೆ ಜಿಲ್ಲಾಡಳಿತ ಕೂಡ ಸುಮ್ಮನಿರುವುದಕ್ಕೆ ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ.

ಚವಾಟ ಯುವಕ ಸಂಘಟನೆ, ಪಂಚ ಸಮಿತಿ, ಗವಳಿ ಸಮಾಜ ಸಹಯೋಗದಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ನೂರಾರು ಜನರು ಭಾಗಿಯಾಗಿದ್ದರು.

ಅದರ ವಿಡಿಯೋಗಳು ಇಲ್ಲಿವೆ ನೋಡಿ...