ಜಿಲ್ಲೆ

ಕಾಂಗ್ರೆಸ್​ನ ‘ಭಾರತ್‌ ಜೋಡೋ ಯಾತ್ರೆ’ಗೆ ರಾಜ್ಯದ ಸಂಯೋಜಕರಾಗಿ ಬಿ.ಕೆ. ಹರಿಪ್ರಸಾದ್​ ನೇಮಕ

ನವದೆಹಲಿ: ದೇಶದಲ್ಲಿ ಕಾಂಗ್ರೆಸ್‌ಗೆ ಮರು ಚೈತನ್ಯ ತರುವ ದೃಷ್ಟಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಂಸದ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ‘ಭಾರತ್‌ ಜೋಡೋ ಯಾತ್ರೆ’ ನಡೆಯಲಿದೆ. ಕನ್ಯಾಕುಮಾರಿಯಿಂದ ಆರಂಭಗೊಳ್ಳಲಿರುವ ಯಾತ್ರೆಯಲ್ಲಿ 12 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶ ಒಳಗೊಂಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ 15 ದಿನಗಳವರೆಗೆ ರಾಹುಲ್ ಗಾಂಧಿ ಯಾತ್ರೆ ನಡೆಯಲಿದೆ. ಈ ಕರ್ನಾಟಕದ ಯಾತ್ರೆಗೆ ಎಐಸಿಸಿಯು ಸಂಯೋಜಕರ ನೇಮಕ ಮಾಡಿದೆ. ಕರ್ನಾಟಕಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸಂಯೋಜಕರಾಗಿ ನೇಮಕಗೊಂಡಿದ್ದಾರೆ.

ಬೆಂಗಳೂರು ಹೊರತುಪಡಿಸಿ ಸುಮಾರು 15 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದೆ. ತುಮಕೂರು, ಚಿತ್ರದುರ್ಗ, ಬಳ್ಳಾರಿ, ಚಾಮರಾಜನಗರ, ಮೈಸೂರು ಸೇರಿದಂತೆ 15 ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ. ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲಿ ಈ ಯಾತ್ರೆ ನಡೆಯಲಿದೆ.