ಬೆಂಗಳೂರು: ಬಿಗ್ಬಾಸ್ ಓಟಿಟಿ ಸೀಸನ್-1 ಶುರುವಾಗಿ ಎರಡು ವಾರಗಳೇ ಕಳೆಯುತ್ತಾ ಬಂದಿವೆ. ಪ್ರತಿವಾರ ಒಬ್ಬೊಬ್ಬರು ಎಲಿಮಿನೇಟ್ ಆಗುವುದು ಇದರ ನಿಯಮ. ಆದರೆ ಮೊದಲ ವಾರದಂತೆ ಎರಡನೆಯ ವಾರವೂ ಇಬ್ಬರು ಎಲಿಮಿನೇಟ್ ಆಗಿದ್ದಾರೆ.
ಒಟ್ಟು 9 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ ಇತ್ತು. ಅವರೆಂದರೆ ಸೋನು ಗೌಡ, ನಂದು, ಅಕ್ಷತಾ, ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್ ಅಡಿಗ ಮತ್ತು ಆರ್ಯವರ್ಧನ್ ಗುರೂಜಿ.
ಈ ಪೈಕಿ ಅತ್ಯಂತ ಕಡಿಮೆ ಮತ ಗಳಿಸಿರುವ ಸ್ಫೂರ್ತಿ ಗೌಡ ಎಲಿಮಿನೇಟ್ ಆಗಿದ್ದಾರೆ. ಸ್ಫೂರ್ತಿ ಗೌಡ ಅವರು ಈ ವಾರದ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ತೋರಿಸಿಲ್ಲ. ಚಿಕ್ಕ ವಿಚಾರಕ್ಕೆ ದೊಡ್ಡದಾಗಿ ಕೂಗಾಡಿದ್ದರು. ಆದ್ದರಿಂದ ಅವರಿಗೆ ಕಡಿಮೆ ಮತ ಬಿದ್ದಿದ್ದರಿಂದ ಎಲಿಮಿನೇಟ್ ಆಗಿದ್ದಾರೆ. ಅಷ್ಟೇ ಅಲ್ಲದೇ, ‘ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ನನಗೆ ಆಸಕ್ತಿ ಇಲ್ಲ’ ಎಂಬುದನ್ನು ಪದೇಪದೇ ಹೇಳುತ್ತಿದ್ದೂದು ಎಲಿಮಿನೇಟ್ಗೆ ಕಾರಣವಾಗಿದೆ. ಇದರಿಂದ ಇವರ ಅಭಿಮಾನಿಗಳಿಗೆ ಭಾರಿ ಶಾಕ್ ಆಗಿದೆ.
ಕುತೂಹಲ ಎಂದರೆ ಮೊದಲನೆಯ ವಾರದಂತೆ ಎರಡನೆಯ ವಾರವೂ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಕಾರಣವೂ ಸೇಮ್ ಟು ಸೇಮ್. ಮೊದಲ ವಾರದಲ್ಲಿ ಕಿರಣ್ ಕಡಿಮೆ ಮತ ಪಡೆದು ಎಲಿಮಿನೇಟ್ ಆದರೆ, ಲೋಕೇಶ್ ಗಾಯಗೊಂಡು ಹೊರ ನಡೆದಿದ್ದರು. ಎರಡನೆಯ ವಾರದಲ್ಲಿ ಕಡಿಮೆ ಮತ ಬಿದ್ದುದಕ್ಕೆ ಸ್ಫೂರ್ತಿ ಗೌಡ ಎಲಿಮಿನೇಟ್ ಆದರೆ, ಗಾಯದ ಸಮಸ್ಯೆಯಿಂದ ಅರ್ಜುನ್ ರಮೇಶ್ ಹೊರ ಹೋಗಿದ್ದಾರೆ.
ಕೆಲವು ಟಾಸ್ಕ್‌ಗಳಲ್ಲಿ ಸ್ಫೂರ್ತಿ ಗೌಡ ಉತ್ಸಾಹ ತೋರಲಿಲ್ಲ. ಅವಕಾಶ ಸಿಕ್ಕರೂ ಸ್ಫೂರ್ತಿ ಗೌಡ ಅದನ್ನ ಸದುಪಯೋಗ ಪಡಿಸಿಕೊಳ್ಳಲಿಲ್ಲ. ತಾವು ಪ್ರಬಲ ಸ್ಪರ್ಧಿ ಎಂಬುದನ್ನ ಪ್ರೂವ್ ಮಾಡುವಲ್ಲಿ ಸ್ಫೂರ್ತಿ ಗೌಡ ಹಿಂದೆಬಿದ್ದರು. ವೀಕ್ಷಕರನ್ನ ಸೆಳೆಯುವಲ್ಲಿ ಸ್ಫೂರ್ತಿ ಗೌಡ ಯಶಸ್ವಿಯಾಗಲಿಲ್ಲ. ಇದೇ ಕಾರಣಕ್ಕೆ ಸ್ಫೂರ್ತಿ ಗೌಡ ಅವರಿಗೆ ಕಳಪೆ ಹಣೆಪಟ್ಟಿ ಸಿಕ್ಕಿತ್ತು. ಟಾಸ್ಕ್‌ಗಳಲ್ಲಿ ಸರಿಯಾಗಿ ಪರ್ಫಾಮ್ ಮಾಡದ ಕಾರಣ ಸ್ಫೂರ್ತಿ ಗೌಡ ಅವರನ್ನು ಇತರೆ ಸ್ಪರ್ಧಿಗಳು ಜೈಲಿಗೆ ಕಳುಹಿಸಿದ್ದರು. ಈ ಕಾರಣದಿಂದ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ.