ಜಿಲ್ಲೆ

VIDEO: ಶಾಂತಿಯುತವಾಗಿದ್ದ ಬಳ್ಳಾರಿ ಕಾಲೇಜಿನಲ್ಲಿ ಕಿಡಿ ಹೊತ್ತಿಸಿದ ಬುರ್ಕಾಧಾರಿ- ಹಲವೆಡೆ ಟ್ರೆಂಡ್‌ ಆದ ‘ಅಲ್ಲಾಹು ಅಕ್ಬರ್‌’!

suchetana

ಬಳ್ಳಾರಿ/ತುಮಕೂರು: ಮಂಡ್ಯದ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್‌ ಎಂದು ಕೂಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆಯೇ, ಇದನ್ನೇ ಇದೀಗ ರಾಜ್ಯದ ಬಹುತೇಕ ಶಾಲಾ-ಕಾಲೇಜುಗಳಲ್ಲಿ ಶುರುಹಚ್ಚಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರು ಮಾತ್ರವಲ್ಲದೇ ಅವರ ಪಾಲಕರೂ ಶಾಲಾ-ಕಾಲೇಜುಗಳ ಮುಂದೆ ಜಮಾಯಿಸಿ ಅಲ್ಲಾಹು ಅಕ್ಬರ್‌ ಕೂಗುತ್ತಿದ್ದಾರೆ.

ತುಮಕೂರಿನ ಕಾಲೇಜಿನಲ್ಲಿಯೂ ಈ ಘಟನೆ ಮುಂದುವರೆದಿದೆ. ಪಾಲಕರು ನಿನ್ನೆ ಶಾಲೆಯ ಮುಂದೆ ಅಲ್ಲಾಹು ಅಕ್ಬರ್‌ ಶುರು ಮಾಡಿದ್ದರೆ, ತುಮಕೂರಿನ ಟೌನ್ ಹಾಲ್ ಬಳಿಯಿರೋ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ಇಂದು ವಿದ್ಯಾರ್ಥಿನಿಯರು ಹೈಡ್ರಾಮಾ ಮಾಡಿದ್ದಾರೆ.

ಹೈಕೋರ್ಟ್‌ ಹಿಜಾಬ್ ತೆಗೆದು ಶಾಲೆಯ ಒಳಗೆ ಬರುವಂತೆ ಶಾಲಾ ಸಿಬ್ಬಂದಿ ಸೂಚಿಸಿದ್ದರೆ, ಈ ವೇಳೆ ನಾವು ಹಿಜಾಬ್ ಧರಿಸಿಯೇ ಶಾಲೆಗೆ ಬರೋದು ಅಂತ ವಿದ್ಯಾರ್ಥಿನಿಯರು ಪಟ್ಟು ಹಿಡಿದು ಘೋಷಣೆ ಕೂಗಿದ್ದಾರೆ.

‌ಬಳ್ಳಾರಿಯಲ್ಲಿ ಕಿಡಿ ಹೊತ್ತಿಸಿದ ಮಹಿಳೆ:

ಇದು ಒಂದೆಡೆಯಾದರೆ ಇನ್ನು, ಶಾಂತಿಯುತವಾಗಿದ್ದ ಬಳ್ಳಾರಿಯಲ್ಲಿ ಹಿಜಾಬ್ ವಿವಾದಕ್ಕೆ ಬುರ್ಕಾಧಾರಿ ಮಹಿಳೆಯೊಬ್ಬಳು ಕಿಡಿ ಹೊತ್ತಿಸಿದ್ದಾರೆ.

ಬಳ್ಳಾರಿಯ ಸರಳಾದೇವಿ ಕಾಲೇಜು ಮುಂಭಾಗದಲ್ಲಿ ಘಟನೆ ನಡೆದಿದೆ. ಮುಸ್ಲಿಂ ಯುವತಿಯನ್ನು ಉದ್ದೇಶಿಸಿ ಮಹಿಳೆಯ ಪ್ರಚೋದನೆ ಹೇಳಿಕೆ ನೀಡುವ ಮೂಲಕ ಇಲ್ಲಿಯೂ ಗಲಾಟೆ ಶುರು ಮಾಡಿ ಎಂದು ಪರೋಕ್ಷವಾಗಿ ಹೇಳಿ ಹೋಗಿದ್ದಾರೆ. ಮಹಿಳೆ ಹೇಳಿಕೆ ಕೊಟ್ಟು ಹೋದ ಬಳಿಕ ಕಾಲೇಜಿನಿಂದ ವಿದ್ಯಾರ್ಥಿನಿಯರು ಹೊರ ಹೊರಟಿದ್ದಾರೆ.

ಬೆಳಿಗ್ಗೆ ಕಾಲೇಜಿನ ಮನವಿಗೆ ಸ್ಪಂದಿಸಿ ಹಿಜಾಬ್ ತಗೆದು ಕ್ಲಾಸ್‌ಗೆ ತೆರಳಿದ್ದ ವಿದ್ಯಾರ್ಥಿನಿಯರು. ಆದರೆ ಅದೇ ವಿದ್ಯಾರ್ಥಿನಿಯರು ಮಹಿಳೆಯ ಹೇಳಿಕೆಯ ನಂತರ ಕಾಲೇಜಿನಿಂದ ಹೊರಹೋಗಿ ಗಲಾಟೆ ಶುರು ಮಾಡಿದ್ದಾರೆ. ಹಿಜಾಬ್ ಹಾಕಿಯೇ ತೀರುತ್ತೇವೆಂದು ಅವರು ಪಟ್ಟು ಹಿಡಿದಿದ್ದಾರೆ.

ಇಲ್ಲಿವೆ ನೋಡಿ ವಿಡಿಯೋ: