ಬೆಂಗಳೂರು: ‘ಹಿರಿಯ ನಟ ಶಿವರಾಂ (81) ಆರೋಗ್ಯದ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ, ಅವರ ಮೆದುಳಿಗೆ ಮತ್ತಷ್ಟು ಹಾನಿಯಾಗಿದೆ. ತುಂಬಾ ಹೊತ್ತು ಅವರು ನಮ್ಮ ಜೊತೆ ಇರುವುದಿಲ್ಲ ಎನಿಸುತ್ತಿದೆ’ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮೋಹನ್ ಕಣ್ಣೀರಿಟ್ಟಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಡಾ.ಮೋಹನ್, ಶಿವರಾಂ ಅವರು ಸದ್ಯ ಜೀವರಕ್ಷಕ ಸಪೋರ್ಟನಲ್ಲಿ ಇದ್ದಾರೆ. ಅವರ ಆರೋಗ್ಯದಲ್ಲಿ ಸುಧಾರಣೆ ಆಗುವ ಭರವಸೆ ಕಳೆದುಕೊಂಡಿದ್ದೇವೆ. ಅವರ ಮೆದುಳು, ಹೃದಯ ಸ್ಪಂದಿಸುತ್ತಿಲ್ಲ, ಚಿಕಿತ್ಸೆಯನ್ನೇನೋ ಮುಂದುವರೆಸಿದ್ದೇವೆ, ಆದರೆ ಅದಕ್ಕೆ ಅವರು ಸ್ಪಂದಿಸುತ್ತಾರೆ ಎಂಬ ಆಶಾಭಾವನೆ ಸದ್ಯ ಇಲ್ಲ’ ಎಂದು ಭಾವುಕರಾದರು.
ಶಿವರಾಂ ಅವರ ಆರೋಗ್ಯ ಸುಧಾರಿಸುವುದು ತುಂಬಾ ಕಷ್ಟವಿದೆ. ಶಿವರಾಂ ಅವರ ಕುಟುಂಬಸ್ಥರು ಕೂಡ ಸಾಧ್ಯವಾದಷ್ಟು ಪ್ರಯತ್ನ ಮಾಡಿ, ಹಿರಿಯ ಜೀವಕ್ಕೆ ಹಿಂಸೆ ನೀಡುವುದು ಬೇಡ ಎನ್ನುತ್ತಿದ್ದಾರೆ. ಆದ್ದರಿಂದ ಏನು ಆಗುತ್ತದೆಯೋ ಅಷ್ಟನ್ನು ಮಾಡುತ್ತಿದ್ದೇವೆ. ಆದರೆ ಪರಿಸ್ಥಿತಿ ಕೈಮೀರಿದೆ. ಅವರನ್ನು ಹಾಸಿಗೆಯಿಂದ ಶಿಫ್ಟ್ ಮಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಎಂಆರ್ ಐ ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ, ಸದ್ಯ ಶಾಂತವಾಗಿ ಮಲಗಿದ್ದಾರೆ’ ಎಂದರು.
ಆಗಿದ್ದೇನು?
ಕಳೆದ ವಾರ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರು ಆಕ್ಸಿಡೆಂಟ್ ಆಗಿತ್ತು. ಆಗ ಶಿವರಾಂ ಅವರನ್ನು ಕರೆತಂದು ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲಾಗಿತ್ತು. ಎಲ್ಲವೂ ನಾರ್ಮಲ್ ಎಂಬಂತೆ ಕಂಡುಬಂದಿತ್ತು. ಅದಾದ ಬಳಿಕ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಆ ವೇಳೆ ರೂಂನಲ್ಲಿ ಕೆಳಗೆ ಬಿದ್ದು, ತಲೆಗೆ ಮತ್ತೆ ಬಲವಾದ ಪೆಟ್ಟಾಗಿರುವುದು ತಿಳಿದುಬಂತು. ಸ್ಕ್ಯಾನಿಂಗ್ ಮಾಡಿಸಿದ್ದಾಗ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಯಿತು. ಅಲ್ಲಿಯೇ ಕೋಮಾಕ್ಕೆ ಜಾರಿದ್ದ ನಟನ ಸ್ಥಿತಿ ಈಗ ಗಂಭೀರವಾಗಿದೆ.
ವೈದ್ಯರು ಏನು ಹೇಳಿದ್ದಾರೆ ನೋಡಿ: