ಬಂಟ್ವಾಳ: ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಬಳಿ ಹೋರ್ಡಿಂಗ್ಸ್ ಒಂದು ವಾಲಿ ನಿಂತಿದೆ. ಈ ಹೋರ್ಡಿಂಗ್ಸ್‌ನಲ್ಲಿ ಯಾವುದೇ ಜಾಹೀರಾತು ಇಲ್ಲ. ಹಲವು ಸಮಯದಿಂದ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿದೆ. ಇದೇ ಸ್ಥಳದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವೂ ಇದ್ದು ಹೋರ್ಡಿಂಗ್ಸ್ ಪಕ್ಕದಲ್ಲಿರುವ ಮೆಟ್ಟಿಲನ್ನು ಬಳಸಿ ವಿದ್ಯಾರ್ಥಿಗಳು ಹೋಗುತ್ತಿರುತ್ತಾರೆ. ತುಕ್ಕು ಹಿಡಿದು ವ್ಯರ್ಥವಾಗುತ್ತಿರುವ ಈ ಹೋರ್ಡಿಂಗನ್ನು ಇಲ್ಲಿಂದ ತೆರವುಗೊಳಿಸಬೇಕು ಅಥವಾ ಸಂಬಂಧಪಟ್ಟವರು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.