ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ದೇರಳಕಟ್ಟೆ ಯೆನೆಪೊಯಾ ವಿದ್ಯಾಸಂಸ್ಥೆಯ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳಿಂದ ರೂರಲ್ ಕ್ಯಾಂಪ್ ಆರಂಭಿಸಲಾಯಿತು.
ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಕಲಾ ಸಂಘದ ಅಧ್ಯಕ್ಷ, ಸಾಹಿತಿ ಡಾ.ರಮಾನಂದ ಬನಾರಿ ಶಿಬಿರ ಉದ್ಘಾಟಿಸಿದರು. ಶಿಬಿರ ಮೇಲ್ವಿಚಾರಕ ಡಾ.ಮಹಮ್ಮದ್ ಗುತ್ತಿಗಾರು ಉಪಸ್ಥಿತರಿದ್ದರು.
ಮೊದಲ ದಿನ ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ಸಂಘದ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ತಾಳಮದ್ದಳೆ ಪ್ರಸ್ತುತ ಪಡಿಸಲಾಯಿತು. ಎರಡನೇ ದಿನ ಕಾಲೇಜಿನ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಪಂಚಾಯಿತಿ ಸದಸ್ಯರಾದ ನಳಿನಾಕ್ಷಿ ಹಾಗೂ ತಾಹಿರ ಸಹಕರಿಸಿದರು. ಮೂರನೇ ದಿನ ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ಕಲಾ ಸಂಘದ ಕಾರ್ಯದರ್ಶಿ ವಿಶ್ವ ವಿನೋದ ಬನಾರಿ ಉಪಸ್ಥಿತರಿದ್ದರು.