ಜಿಲ್ಲೆ

ರಮ್​+ ಗುಲಾಬ್​ ಜಾಮೂನ್= ಸ್ವರ್ಗ! ವೈರಲ್​ ಆಗ್ತಿದೆ ನೆಟ್ಟಿಗರ ನೆಚ್ಚಿನ 'ಮದ್ಯ' ಬೆರೆತ ಸಿಹಿ | Viral Video

ಮೋಹನ್​ ಶೆಟ್ಟಿ

ಬೆಂಗಳೂರು: ಸಾಮಾಜಿಕ ಜಾಲತಾಣ ಅಂದಮೇಲೆ ಅಲ್ಲೊಂದು ವೈರಲ್ ಸುದ್ದಿಗಳು ಇರಲೇಬೇಕು. ಅಕಸ್ಮಾತ್ ಇಲ್ಲವಾದರೆ, ಯಾವುದಾದರೂ ಒಂದು ದೃಶ್ಯ ಕ್ಷಣಮಾತ್ರದಲ್ಲಿ ನೆಟ್ಟಿಗರ ಗಮನಸೆಳೆದು, ಆ ಸ್ಥಾನವನ್ನು ಅಲಂಕರಿಸುತ್ತದೆ. ಈ ಸಾಲಿಗೆ ಆಹಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು (Viral Video), ನೋಡುಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

ಹಾಟ್​ ಪ್ರಿಯರ ರಮ್​ ಅಥವಾ ವಿಸ್ಕಿ

ಅಸಲಿಗೆ ಮದ್ಯ ಮತ್ತು ಸ್ವೀಟ್​ ಪ್ರಿಯರಿಗೆ ಈ ವಿಡಿಯೋ ಬಹಳ ಇಷ್ಟವಾಗಲಿದೆ. ಸಣ್ಣ ಪಾರ್ಟಿ ಎಂದು ಮನಬಂದಂತೆ ಎಣ್ಣೆ ಕುಡಿದು, ತೇಲಾಡುವ ಮದ್ಯಪ್ರಿಯರು, ಬಿಯರ್​ಗಿಂತಲೂ ಹೆಚ್ಚಾಗಿ ಹಾಟ್​ ಡ್ರಿಂಕ್ಸ್​ ಇಷ್ಟಪಡುತ್ತಾರೆ. ಜತೆಗೆ ಇದು ಹಲವರ ಉತ್ತಮ ಆಯ್ಕೆ ಕೂಡ. ಪ್ರತ್ಯೇಕವಾಗಿ ಏಕೆ ಎಂಬುದಕ್ಕೆ ಅವರದ್ದೇ ಆದ ಕಾರಣಗಳಿವೆ. ಸದ್ಯ ಈ ವಿಡಿಯೋದಲ್ಲಿ ಹಾಟ್​ ಪ್ರಿಯರು ರಮ್​ ಅಥವಾ ವಿಸ್ಕಿಯನ್ನು ಅಧಿಕ ಸಂಖ್ಯೆಯಲ್ಲಿ ಸೇವಿಸುತ್ತಾರೆ. ಇದರಲ್ಲಿ ಕಿಕ್ ಸಿಗಲಿ ಎಂದು ಕೆಲವರು 'ಓಲ್ಡ್​ ಮಾಂಕ್'​ ಅಥವಾ 'ಬಕಾರ್ಡಿ' ಕುಡಿತಾರೆ. ಅಸಲಿಗೆ ಇದೇ ರಮ್​, ಸಿಹಿ ಸಿಹಿಯಾದ ಗುಲಾಬ್ ಜಾಮೂನ್​ ಜತೆಗೆ ಸಿಕ್ಕರೆ ಹೇಗೆ?

ಇಲ್ಲಿದೆ ನೋಡಿ ರನ್​+ಜಾಮೂನ್ ವಿಡಿಯೋ

ಎರಡರಿಂದ ಮೂರು ಹನಿಗಳು ರಮ್​

ಸ್ವೀಟ್​ ಮತ್ತು ಮದ್ಯಕ್ಕೂ ಅಜಗಜಾಂತರ! ಮದ್ಯಪಾನ ಮಾಡುವವರು ಹೆಚ್ಚಾಗಿ ಖಾರ ಅಥವಾ ಗರಂ ಗರಂ ಚಿಪ್ಸ್​ ಇಲ್ಲವೇ ಇತರೆ ಡಿಶ್​ಗಳನ್ನು ಜತೆಯಲ್ಲಿ ಸೇವಿಸುತ್ತಾರೆಯೇ ಹೊರತು ಸಿಹಿಯೊಂದಿಗೆ ಅಲ್ಲ. ಇದು ಅನೇಕರಿಗೂ ತಿಳಿದಿರುವ ಸಂಗತಿಯೇ. ಆದರೆ, ಇಲ್ಲೊಂದು ವೈರಲ್ ವಿಡಿಯೋದಲ್ಲಿ ಗುಲಾಬ್ ಜಾಮೂನ್​ಗೆ ಎರಡರಿಂದ ಮೂರು ಹನಿಗಳು ರಮ್​ ಮಿಶ್ರಣ ಮಾಡಿ, ಗ್ರಾಹಕರಿಗೆ ಕೊಡಲಾಗುತ್ತಿದೆ. ಈ ದೃಶ್ಯ ಕೆಲವರಿಗೆ ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವರಿಗೆ ಬಾಯಲ್ಲಿ ನೀರು ತರಿಸಿದೆ. ಒಂದಷ್ಟು ಜನ ವಿಡಿಯೋ ಮೆಚ್ಚಿದ್ದು, ರಮ್​+ ಗುಲಾಬ್​ ಜಾಮೂನ್= ಸ್ವರ್ಗ ಎಂದು ಕಮೆಂಟ್​ ಮಾಡಿದ್ದಾರೆ,(ಏಜೆನ್ಸೀಸ್).