ಹಗೇದಾಳದಲ್ಲಿ ಏರ್ಪಡಿಸಿದ್ದ ಗುಡುಗು ಹೊಡೆದ ಗರುಡ ಅರ್ಥಾತ್ ಮರಣ ಮೃದಂಗ ಎಂಬ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಪ್ರಗತಿಪರ ಕೃಷಿಕ ರಸೂಲ್‌ಸಾಬ್ ದಮ್ಮೂರು ಚಾಲನೆ ನೀಡಿದರು. ಪ್ರಮುಖರಾದ ಕಳಕನಗೌಡ ಗೌಡ್ರ, ರವೀಂದ್ರ ಹವಾಲ್ದಾರ, ಮುತ್ತಪ್ಪಜ್ಜ ಸಾಬಳೆ, ತಿಪ್ಪಣ್ಣ ಬಡಿಗೇರ, ಭೀಮನಗೌಡ ಪಾಟೀಲ್ ಇದ್ದರು. 
ಜಿಲ್ಲೆ

ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಯಲಬುರ್ಗಾ: ಆಧುನಿಕ ಭರಾಟೆಯಲ್ಲಿ ಕಲೆ, ಸಾಹಿತ್ಯ, ರಂಗಭೂಮಿ ನೇಪಥ್ಯಕ್ಕೆ ಸರಿಯುತ್ತಿದೆ. ಉಳಿವಿಗಾಗಿ ಯುವ ಪೀಳಿಗೆ ಮುಂದಾಗಬೇಕು ಎಂದು ಪ್ರಗತಿಪರ ಕೃಷಿಕ ರಸೂಲ್‌ಸಾಬ್ ದಮ್ಮೂರು ಹೇಳಿದರು.

ಕಲೆಗಳ ಉಳಿವಿಗಾಗಿ ಶ್ರಮಿಸಿ

ತಾಲೂಕಿನ ಹಗೇದಾಳ ಗ್ರಾಮದ ಮಾರುತೇಶ್ವರ ಜಾತ್ರೋತ್ಸವ ನಿಮಿತ್ತ ಮಾರುತೇಶ್ವರ ಯುವ ಕಲಾ ನಾಟ್ಯ ಸಂಘ ಭಾನುವಾರ ಹಮ್ಮಿಕೊಂಡಿದ್ದ ಗುಡುಗು ಹೊಡೆದ ಗರುಡ ಅರ್ಥಾತ್ ಮರಣ ಮೃದಂಗ ಎಂಬ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಲೆ ಉಳಿಸುವುದು ಜತೆಗೆ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಾಟಕಗಳು ಜೀವಂತ ಉಳಿಯುವಲ್ಲಿ ಗ್ರಾಮೀಣ ಕಲಾವಿದರ ಪಾತ್ರ ಸಾಕಷ್ಟಿದೆ ಎಂದರು.

ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಮಾತನಾಡಿ, ನಾಟಕಗಳು ಈ ಹಿಂದೆ ಹೆಚ್ಚು ಪ್ರದರ್ಶನಗೊಂಡು ಜನಮಾನಸದಲ್ಲಿ ಉಳಿಯುತ್ತಿದ್ದವು. ನಾಟಕಗಳ ಪಾತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಾಗುತ್ತಿತ್ತು. ಆದರೆ, ಇಂದು ಪ್ರದರ್ಶನಗಳು ಕ್ಷೀಣಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರಾದ ಕಳಕನಗೌಡ ಗೌಡ್ರ, ರವೀಂದ್ರ ಹವಾಲ್ದಾರ, ಮುತ್ತಪ್ಪಜ್ಜ ಸಾಬಳೆ, ತಿಪ್ಪಣ್ಣ ಬಡಿಗೇರ, ಭೀಮನಗೌಡ ಪಾಟೀಲ್, ಗಣ್ಯರಾದ ಶೇಖಪ್ಪ ವಣಗೇರಿ, ದೊಡ್ಡಬಸಪ್ಪ ಭಾವಿಮನಿ, ಶ್ರೀಕಾಂತಗೌಡ ಮಾಲಿಪಾಟೀಲ್, ರಮೇಶ ಜೂಲಕಟ್ಟಿ, ಬಸಪ್ಪ ತೊಂಡಿಹಾಳ, ಕಳಕಪ್ಪ ದುಗಲದ, ಬಸವರಾಜ ರೊಟ್ಟಿ, ಕಾಮಪ್ಪ ಹೊರಪೇಟಿ, ಶರಣಪ್ಪ ಅಡಗುಡದ, ಶರಣಪ್ಪ ಅಂಗಡಿ ಇತರರಿದ್ದರು.