More

    ಪಟಾಕಿ ಕಾರ್ಖಾನೆ ಸ್ಫೋಟ; ಮಮತಾ ಬ್ಯಾನರ್ಜಿ ರಾಜೀನಾಮೆಗೆ ಬಿಜೆಪಿ ಆಗ್ರಹ!

    ಪಶ್ಚಿಮ ಬಂಗಾಳ: ಭಾನುವಾರ (ಆಗಸ್ಟ್​ 27) ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏಳು ಮಂದಿ ಸಾವನ್ನಪ್ಪಿದರು. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ತಂಬಾಕು ನಿಯಂತ್ರಿಸುವಲ್ಲಿ ಪಂಚಾಯಿತಿ ಅಧಿಕಾರಿಗಳ ಪಾತ್ರ ಪ್ರಮುಖ

    ಘಟನೆ ನಡೆದು ಒಂದು ದಿನದ ಬಳಿಕ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಈ ವಿಚಾರವಾಗಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿ ನಾಯಕರು, ಭಾನುವಾರ ಸಂಭವಿಸಿದ ದುರಂತದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸುವಂತೆ ಆಗ್ರಹಿಸಿದರು.

    ಸಭಾತ್ಯಾಗ ಮಾಡಿದ ಸುವೆಂದು ಅಧಿಕಾರಿ, ರಾಜ್ಯ ಸರ್ಕಾರವನ್ನು ಬೇಜವಾಬ್ದಾರಿ ಎಂದು ಕರೆದು, “ಮುಖ್ಯಮಂತ್ರಿ ಅವರು ಸದನದಲ್ಲಿ ಪ್ರಶ್ನೋತ್ತರ ಅವಧಿಗೆ ಎಂದಿಗೂ ಹಾಜರಾಗುವುದಿಲ್ಲ. ಸಿಎಂ ವನಮಹೋತ್ಸವದಲ್ಲಿ ಭಾಗವಹಿಸಲು ಬರುತ್ತಾರೆ. ಆದ್ರೆ, ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಇಂತಹ ಸ್ಫೋಟಗಳಿಂದ ಜನ ಸಾಯುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ” ಎಂದು ಸುವೆಂದು ಅಧಿಕಾರಿ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಕಕ ಭಾಗದಲ್ಲಿ 1600 ಹುದ್ದೆಗಳ ಭರ್ತಿ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

    ಸ್ಫೋಟ ಸಂಭವಿಸಿದ ಪಟಾಕಿ ಕಾರ್ಖಾನೆಯಲ್ಲಿ ಆರ್‌ಡಿಎಕ್ಸ್ ಇರುವ ಶಂಕೆಯಿದೆ. ಕೇವಲ ಪಟಾಕಿಗಳು ಮಾತ್ರವಲ್ಲದೆ ಕಚ್ಚಾ ಬಾಂಬ್‌ಗಳನ್ನು ಸಹ ಅಲ್ಲಿಂದ ಸರಬರಾಜು ಮಾಡಲಾಗುತ್ತಿದೆ” ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ,(ಏಜೆನ್ಸೀಸ್).

    VIDEO | ಬರಿಗೈಯಲ್ಲಿ ಹಾವನ್ನು ಸೆರೆಹಿಡಿದ ಯುವತಿ!; ವಿಡಿಯೋ ಕಂಡು ನಿಬ್ಬೆರಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts