ಜಿಲ್ಲೆ

ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಆರೆಸ್ಸೆಸ್

ಬೆಂಗಳೂರು: ರಾಮ ಮಂದಿರ ಅಭಿಯಾನದ ಸಂದರ್ಭದಲ್ಲಿ ನಿಧಿ ನೀಡದ ಮನೆಗಳನ್ನು ಮಾರ್ಕ್ ಮಾಡುವ ಸಂಸ್ಕೃತಿ ನಮ್ಮದಲ್ಲ ಎಂದು ಮಾಜಿ ಸಿಎಂ ಎಚ್‌ಡಿ‌ ಕುಮಾರಸ್ವಾಮಿ ಹೇಳಿಕೆಗೆ ಆರೆಸ್ಸೆಸ್ ತಿರುಗೇಟು ನೀಡಿದೆ.

ಚನ್ನೇನಹಳ್ಳಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಮಾತನಾಡಿದರು.

ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹ ಅಭಿಯಾನದ ವೇಳೆ ದೇಶದಲ್ಲಿ 12 ಕೋಟಿಗೂ ಹೆಚ್ಚು ಪರಿವಾರಗಳನ್ನು ತಲುಪಿದ್ದೇವೆ. ಗೆಚ್ಚು ಮನೆಗಳಿಗೆ ತಲುಪುವುದು ನಮ್ಮ ಗುರಿ ಆಗುತ್ತೇ ವಿನಃ ಹೆಚ್ಚು ಹಣ ಸಂಗ್ರಹ ಮಾಡುವುದಲ್ಲ. ಹಣ ನೀಡದ ಮನೆಗಳನ್ನು ಮಾರ್ಕ್ ಮಾಡುವ ಸಂಸ್ಕೃತಿ ನಮ್ಮದಲ್ಲ. ಇಡೀ ಸಮಾಜವನ್ನು ಒಟ್ಟಿಗೆ ಜೋಡಿಸುವತ್ತ ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

ಆರೆಸ್ಸೆಸ್ ಸ್ವಯಂಸೇವಕರು, ನಿಧಿ ನೀಡದ ಮನೆಗಳನ್ನು ಮಾರ್ಕ್ ಮಾಡಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು.