ಧಾರವಾಡ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್, ತಾಲೂಕಿನ ಗರಗ ರಸ್ತೆಯ ಮಾಧವನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಗುರುವಾರ ಆರಂಭಗೊಂಡಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಮೂರು ದಿನಗಳ ಬೈಠಕ್ಗೆ ಚಾಲನೆ ನೀಡಿದರು.
ದೇಶದ ಎಲ್ಲ ಪ್ರಾಂತಗಳ ಹಾಗೂ ಕ್ಷೇತ್ರಗಳ ಸಂಘಚಾಲಕ, ಕಾರ್ಯವಾಹ, ಪ್ರಚಾರಕ, ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರು ಮತ್ತು ಆಯ್ದ ಸಂಘಟನೆಗಳ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಸೇರಿ ಸುಮಾರು 350 ಸ್ವಯಂ ಸೇವಕರು ಬೈಠಕ್ನಲ್ಲಿ ಭಾಗವಹಿಸಿದ್ದಾರೆ. ಸಂಘದ ಕಾರ್ಯಗಳ ಪ್ರಸ್ತುತ ಸ್ಥಿತಿಗತಿ, ಕಾರ್ಯ ವಿಸ್ತಾರ ಹಾಗೂ ಸ್ವಯಂ ಸೇವಕರ ವಿಕಾಸದ ಯೋಜನೆಗಳ ಕುರಿತು ರ್ಚಚಿಸಲಾಯಿತು. ಸಭೆಯು ಶನಿವಾರ ಸಂಜೆ ಸಮಾರೋಪಗೊಳ್ಳಲಿದ್ದು, ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂದುಗಳ ಮೇಲಿನ ಹಿಂಸಾಚಾರ ವಿರೋಧಿಸಿ ನಿರ್ಣಯವನ್ನು ಅಂಗೀಕರಿಸಲಾಗುವುದು.ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.