ಸುಳ್ಯ: ಸುಳ್ಯ ರೋಟರಿ ಕ್ಲಬ್ ವತಿಯಿಂದ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಮಾಹಿತಿ ಕಾರ್ಯಾಗಾರ ಐವರ್ನಾಡಿನಲ್ಲಿ ಇತ್ತೀಚೆಗೆ ನಡೆಯಿತು.
ಸ್ತ್ರೀರೋಗ ತಜ್ಞೆ ಡಾ.ವೀಣಾ ಮಾಹಿತಿ ನೀಡಿದರು. ರೋಟರಿ ಕ್ಲಬ್ ಅಧ್ಯೆ ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಯೋಜಕಿ ಮಮತಾ ಸತೀಶ್ ಮಡ್ತಿಲ, ಸುಳ್ಯ ಇನ್ನರ್ವೀಲ್ ಕ್ಲಬ್ ಅಧ್ಯೆ ಚಿಂತನಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸದಸ್ಯೆ ಮಧುರಾ ಜಗದೀಶ್, ಇನ್ನರ್ವೀಲ್ ಕ್ಲಬ್ ಸದಸ್ಯೆ ನಮಿತಾ ನವೀನ್, ಐವರ್ನಾಡು ಸ್ತ್ರೀಶಕ್ತಿ, ಮಹಿಳಾ ಮಂಡಲದ ಸದಸ್ಯೆಯರು ಪಾಲ್ಗೊಂಡಿದ್ದರು.