ಜಿಲ್ಲೆ

ರಸ್ತೆ ಗುಂಡಿಗೆ ತೇಪೆ ಕಾರ್ಯ!

Avinash R

ಸುಳ್ಯ: ನಗರದ ಮುಖ್ಯ ರಸ್ತೆಯ ಕಟ್ಟೆಕಾರ್ ಜಂಕ್ಷನ್ ಮತ್ತು ಅಲೆಟ್ಟಿ ಕ್ರಾಸ್‌ನಲ್ಲಿ ರಸ್ತೆ ಮಧ್ಯೆ ಗುಂಡಿ ಬಿದ್ದಿದ್ದು ತಾತ್ಕಾಲಿಕವಾಗಿ ಕಾಂಕ್ರೀಟ್ ಮಿಕ್ಸರ್ ಬಳಸಿ ಶುಕ್ರವಾರ ರಸ್ತೆ ದುರಸ್ತಿ ಮಾಡಲಾಯಿತು.

ಮುಖ್ಯ ರಸ್ತೆಯಲ್ಲೇ ಗುಂಡಿ ಬಿದ್ದು ಸಂಚಾರಕ್ಕೆ ಅನಾನುಕೂಲವಾದ ಹಿನ್ನೆಲೆಯಲ್ಲಿ ದುರಸ್ತಿ ಪಡಿಸಲು ಸಾರ್ವಜನಿಕರು ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ ನ.ಪಂ ಇದೀಗ ತಾತ್ಕಾಲಿಕ ಪರಿಹಾರ ಒದಗಿಸಿದೆ.

ಈಗಾಗಲೇ ನ.ಪಂ ಅಧ್ಯಕ್ಷೆ ರಾಷ್ಟೀಯ ಹೆದ್ದಾರಿ ಇಂಜಿನಿಯರ್‌ಗಳೊಂದಿಗೆ ಮಾತನಾಡಿದ್ದು, ಮಳೆ ಕಡಿಮೆ ಅದ ತಕ್ಷಣ ಡಾಂಬರು ಕಾಮಗಾರಿ ಮಾಡುವುದಾಗಿ ತಿಳಿಸಿದ್ದಾರೆ.