ಕಡಬ: ರೈತರ ವಿವಿಧ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಹಾಗೂ ಸಮಸ್ಯೆ ಪರಿಹಾರಕ್ಕೆ ಸಹಕಾರ ಸಚಿವರು ಹಾಗೂ ಕಂದಾಯ ಸಚಿವರ ಬಳಿಗೆ ರೈತರ ನಿಯೋಗ ತೆರಳಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಿ, ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸಂಘ ಅಧ್ಯಕ್ಷ ತಾರಾನಾಥ ಕಾಯರ್ಗ ರಸ್ತೆ ಚಾಲನೆಗೈದರು. ಸಂಘ ಹಾಲಿ ನಿರ್ದೇಶಕ ಗಣೇಶ್ ನಿಡ್ವಣ್ಣ್ಣಾಯ ದೀಪ ಬೆಳಗಿಸಿದರು. ಸವಣೂರು ಗ್ರಾಪಂ ಅಧ್ಯಕ್ಷೆ ಸುಂದರಿ ಬಿ.ಎಸ್., ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸವಣೂರು ಪ್ರಾ.ಕೃ.ಪ. ಸಹಕಾರ ಸಂಘ ನಿರ್ದೇಶಕರಾದ ಉದಯ ರೈ , ಪ್ರಕಾಶ್ ರೈ ಸಾರಕರೆ, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಶಿವಪ್ರಸಾದ್ ಕಳುವಾಜೆ, ಜ್ಞಾನೇಶ್ವರಿ ಬರೆಪ್ಪಾಡಿ, ಸೀತಾಲಕ್ಷ್ಮೀ, ತಿಮ್ಮಪ್ಪ ಬನಾರಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಗಣೇಶ್ ಉದನಡ್ಕ, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು, ಜಿಲ್ಲಾ ಯುವ ಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸಂಘ ಉಪ ಕಾರ್ಯನಿರ್ವಹಣಾಧಿಕಾರಿ ಜಲಜಾ ಎಚ್. ರೈ, ಸಂಘ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಸವಣೂರು ಶಾಖಾ ವ್ಯವಸ್ಥಾಪಕಿ ಜಯಂತಿ ಮೊದಲಾದವರಿದ್ದರು. ಸಂಘ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿದರು. ಸಂಘ ಉಪಾಧ್ಯಕ್ಷ ಚೇತನ್‌ಕುಮಾರ್ ಕೋಡಿಬೈಲು ವಂದಿಸಿದರು. ಸಿಇಒ ಚಂದ್ರಶೇಖರ್ ಪಿ. ನಿರೂಪಿಸಿದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವತಿಯಿಂದ ಕಾಂಕ್ರೀಟಿಕರಣ ಮಾಡಲಾದ ಸಂಘ ಗೋದಾಮು ಹಾಗೂ ಸವಣೂರು ಸರ್ಕಾರಿ ಶಾಲೆಗೆ ಸಂಪರ್ಕ ಮಾಡುವ ರಸ್ತೆ ಉದ್ಘಾಟಿಸಿ ಮಾತನಾಡಿದರು.