ಹುಬ್ಬಳ್ಳಿ: ಗ್ರಾಹಕರೊಬ್ಬರ ಮನೆಗೆ ಅಕ್ಕಿ ಮೂಟೆಯನ್ನು ಇಡಲು ಹೋದ ಆಟೋ ಚಾಲಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ. ಮನೆಯಲ್ಲಿದ್ದ ಯುವತಿಯ ಬಟ್ಟೆ ವಿವಸ್ತ್ರಗೊಳಿಸಿ ಬೆತ್ತಲೆ ಚಿತ್ರವನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದವ ಮಾಡಿದ ಅವಾಂತರ ಅಷ್ಟಿಷ್ಟಲ್ಲ.
ಈ ಬಗ್ಗೆ ಸಂತ್ರಸ್ತ ಯುವತಿಯ ತಾಯಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹುಬ್ಬಳ್ಳಿಯ ಆಟೋ ಚಾಲಕ ಅನಿಲ್ ರಾಜ್ ಆರೋಪಿ. ಯುವತಿ ತಾಯಿ ಸರ್ಕಾರಿ ಉದ್ಯೋಗಿ. ಇವರಿಗೆ ಅನಿಲ್ ರಾಜ್ ಪರಿಚಯವಿದ್ದ. ಆ ಹಿನ್ನೆಲೆಯಲ್ಲಿ ಯುವತಿಯ ತಾಯಿಯನ್ನು ಈತ ತನ್ನ ಆಟೋದಲ್ಲಿ ಕಚೇರಿಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದ. ಇದನ್ನೂ ಓದಿರಿ ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…
ಆರೋಪಿಯ ಬ್ಲ್ಯಾಕ್ಮೇಲ್ಗೆ ರೋಸಿಹೋದ ಸಂತ್ರಸ್ತೆಯ ತಾಯಿ ಮಾ.23ರಂದು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.