ಕವಿತಾಳದಲ್ಲಿ ಆಯೋಜಿಸಿದ್ದ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ರಮೇಶ ಇರಬಗೇರಾ ಮಾತನಾಡಿದರು. ಸಂಘದ ರಾಜ್ಯ ಅಧ್ಯಕ್ಷ ಎಂ.ಡಿ.ಮೆಹಬೂಬ್, ಪ್ರಮುಖರಾದ ಶೇಖರಪ್ಪ ಕೋಟೆ, ಕರಿ ಹೊಳೆಯಪ್ಪ, ನಿಂಗಪ್ಪ ರೋಡಲಬಂಡಾ, ಮೌನೇಶ ಕಲಂಗೇರ, ಯಾಕೂಬ್, ಬಸವರಾಜ ನಾಯಕ, ಫಕೀರಪ್ಪ, ಹನುಮಂತ ಬುಳ್ಳಾಪುರ ಇತರರಿದ್ದರು. 
ಜಿಲ್ಲೆ

ಕ್ರಾಂತಿಕಾರಿಗಳ ದೇಶಪ್ರೇಮ ಅನುಕರಣೀಯ

Kopala - Desk - Eraveni

ಕವಿತಾಳ: ಸ್ವಾತಂತ್ರೃ ಸೇನಾನಿಗಳಾದ ಭಗತ್‌ಸಿಂಗ್, ರಾಜಗುರು, ಸುಖದೇವ್ ಇವರು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು ಎಂದು ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ರಮೇಶ ಇರಬಗೇರಾ ಹೇಳಿದರು.

ಪಟ್ಟಣದಲ್ಲಿ ಎಂಎಲ್‌ಪಿಐ(ರೆಡ್‌ಫ್ಲಾೃಗ್)ಯಿಂದ ಹಮ್ಮಿಕೊಂಡಿದ್ದ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಬಿಡಿಸಲು ಕ್ರಾಂತಿಕಾರರಾಗಿ ಹೋರಾಡಿದರು. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟರು. ಇವರ ಬದುಕು, ತತ್ವಗಳು, ದೇಶಪ್ರೇಮ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಸಂಘದ ರಾಜ್ಯ ಅಧ್ಯಕ್ಷ ಎಂ.ಡಿ.ಮೆಹಬೂಬ್, ಪ್ರಮುಖರಾದ ಶೇಖರಪ್ಪ ಕೋಟೆ, ಕರಿ ಹೊಳೆಯಪ್ಪ, ನಿಂಗಪ್ಪ ರೋಡಲಬಂಡಾ, ಮೌನೇಶ ಕಲಂಗೇರ, ಯಾಕೂಬ್, ಬಸವರಾಜ ನಾಯಕ, ಫಕೀರಪ್ಪ, ಹನುಮಂತ ಬುಳ್ಳಾಪುರ, ಅಮರೇಶ, ಹುಲುಗಪ್ಪ ಕೆಳಗೇರ, ಬಸವರಾಜ ರೋಡಲಬಂಡ, ಗುಂಡಪ್ಪ ಬಡಿಗೇರ, ಅಮರಪ್ಪ ಕುರುಬರ, ಬಸಪ್ಪ ಚಲುವಾದಿ, ಯಕಪ್ಪ ಉಪ್ಪಾರ ಇತರರಿದ್ದರು.